ಕನ್ನಡ · ರವಿ ಹಂಜ್ · Uncategorized

‘ಹುಯೆನ್ ತ್ಸಾಂಗನ ಮಹಾಪಯಣ’ – ರವಿ ಹಂಜ್

FB_IMG_1537291524521.jpg

#ಅಲೆಮಾರಿ_ಹುಯೆನ್_ತ್ಸಾಂಗನೂ
#ರವಿ_ಹಂಜ್‌ರ_ಮಹಾಪಯಣ_ಕೃತಿಯು.
********
Ravi Hanj ನಮ್ಮ ನೆರೆಯ ಜಿಲ್ಲೆಯಾದ ದಾವಣಗೆರೆಯವರು. ದೂರದ ವಲಸಿಗರ ನಾಡಲ್ಲಿ ಕುಳಿತು ತಾಯ್ನೆಲದ ಬೆಳವಣಿಗೆಗಳ ಕುರಿತು ತಮ್ಮ ಕಳಕಳಿ, ಕಾಳಜಿ ವ್ಯಕ್ತಪಡಿಸುತ್ತಾರೆ.
ಫೇಸ್‌ಬುಕ್‌ ಮೂಲಕ ಪರಿಚಯವಾದ ಅವರು ನಮ್ಮ ಜಿಲ್ಲೆಯ ಹಿರಿಯ ಪತ್ರಕರ್ತ Chandrakanta Vaddu ಅವರ ಸಮಾಜಮುಖಿ ಪ್ರಕಾಶನದ ಚೊಚ್ಚಲ ಪುಸ್ತಕ ಹುಯೆನ್ ತ್ಸಾಂಗನ ಮಹಾಪಯಣವನ್ನು ಬರೆದಿದ್ದಾರೆ.
ಕರ್ನಾಟಕದ ಪ್ರಮುಖ ರಾಜ ಸತ್ಯಾಶ್ರಯ ಪುಲಕೇಶಿ ಹಾಗೂ ಹರ್ಷವರ್ಧನನ ಜೀವಿತಾವಧಿಯಲ್ಲಿ ದೂರದ ಚೀನಾ ದೇಶದಿಂದ ಹುಯೆನ್ ತ್ಸಾಂಗ್ ಭಾರತಕ್ಕೆ ಬಂದಿದ್ದ ಎಂಬುದಾಗಿ ನಮ್ಮ ಪ್ರಾಥಮಿಕ ಪಠ್ಯ ಪುಸ್ತಕದಲ್ಲಿ ಓದಿದ್ದೆ. ಆನಂತರ ಈ ಮಹಾನ್ ಪ್ರವಾಸಿಯ ಕುರಿತು ಹೆಚ್ಚು ತಿಳಿಯಲು ಬಯಸಿದ್ದರೂ ಆಕರಗಳ ಕೊರತೆಯಿಂದ ನನ್ನ ನೆಚ್ಚಿನ ಹೀರೋ ಕುರಿತು ಹೆಚ್ಚು ತಿಳಿಯಲು ಸಾಧ್ಯವಾಗಿರಲಿಲ್ಲ.
ಬೌದ್ಧ ಧರ್ಮೀಯ ಹುಯೆನ್ ತ್ಸಾಂಗ್ ಆಧ್ಯಾತ್ಮಿಕ ಸತ್ಯಗಳನ್ನು, ಅರಿಯಲು, ಭಾರತ ದೇಶ ಎನ್ನುವ ಪವಿತ್ರ ಭೂಮಿಯನ್ನು ಸ್ಪರ್ಶಿಸಲು, ಈ ನೆಲದಲ್ಲಿ ನಡೆದಾಡಲು, ಇಲ್ಲಿನ ಜನ ಜೀವನ ತಿಳಿಯಲು ಹುಯೆನ್ ತ್ಸಾಂಗ್ ೧೫ ಸಾವಿರ ಮೈಲುಗಳ ಮಹಾಪಯಣ ಕೈಗೊಳ್ಳುತ್ತಾನೆ.
ಇಂತಹ ಮಹತ್ವದ ವ್ಯಕ್ತಿಯ ಕುರಿತು ಭಾರತೀಯ ಭಾಷೆಗಳಲ್ಲಿ ಪೂರ್ಣ ಪ್ರಮಾಣದ ಪುಸ್ತಕ ಬಂದಿಲ್ಲ. ಇಂತಹ ಮಹತ್ವದ ಕೃತಿಯನ್ನು ರಚಿಸಿದ ರವಿ ಹಂಜ್ ಕನ್ನಡ ಸಾಹಿತ್ಯ ಲೋಕದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ.
ಈ ಮಹಾಪಯಣಿಗನ ಜೀವನ ಕುರಿತು ಕನ್ನಡ ಭಾಷೆಯಲ್ಲಿ ಮೊದಲ ಬಾರಿಗೆ ಪುಸ್ತಕವೊಂದನ್ನು ಬೆಳಕಿಗೆ ತಂದ ಹೆಮ್ಮೆಗೆ ರವಿ ಹಂಜ್ ಕಾರಣರಾಗಿದ್ದಾರೆ.
ಮಹಾಪಯಣದ ಪ್ರತಿ ಪುಟದ ಓದು ರೋಚಕವಾಗಿದೆ. ಮ್ಯಾನೇಜ್‌ಮೆಂಟ್ ತಜ್ಞ ರವಿ ಹಂಜ್ ಅಪಾರ ಪರಿಶ್ರಮ, ಅಧ್ಯಯನ, ಮಾಹಿತಿ ಸಂಗ್ರಹ, ವಿದ್ವಾಂಸರೊಡನೆ ಚರ್ಚೆಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ.
ಎಡ, ಚಾರಣಿಗ, ಪ್ರವಾಸಿ, ಪರಿಸರ ಪ್ರಿಯರೆಲ್ಲರೂ ಇಷ್ಟಪಡುವ ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಕೃತಿಗಳಿಂದ ಪ್ರಭಾವಿತರಾದವರು ಅನೇಕರು. ತೇಜಸ್ವಿ ಅವರ ಬರವಣಿಗೆಯಿಂದ ಪ್ರೇರಣೆ ಪಡೆದ ಲೇಖಕ ರವಿ ಹಂಜ್ ಮಹಾ ಪ್ರವಾಸಿ ಹುಯೆನ್ ತ್ಸಾಂಗ್ ಕುರಿತ ಅಧ್ಯಯನಪೂರ್ಣ ಕೃತಿ ರಚಿಸಿದ್ದಾರೆ.
ನನ್ನ ದೃಷ್ಟಿಯಿಂದ ಈ ಪುಸ್ತಕ ಪ್ರತಿಯೊಬ್ಬ ಕನ್ನಡಿಗನೂ ಓದಬೇಕು. ಮನೆಯಲ್ಲಿ ಮಕ್ಕಳಿಂದಲೂ ಓದಿಸಬೇಕು. ಈ ಪುಸ್ತಕ ಓದಿದರೆ ನಮ್ಮ ಭಾರತ ದೇಶದ ಕುರಿತು ಗೌರವಾದರಗಳು ಹೆಚ್ಚುವಲ್ಲಿ ಸಂಶಯವಿಲ್ಲ.
******
#ಮಹಾಪಯಣ_ಪುಸ್ತಕ_ಲೋಕಾರ್ಪಣೆ.
ಸಮಾಜಮುಖಿ ಪ್ರಕಾಶನದ ಮಹಾಪಯಣ ಕೃತಿ ಇದೇ ತಿಂಗಳ ೩೦ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಸಮಾಜಮುಖಿ ಪ್ರಕಾಶನ ೧೨೦ ರೂ ಮುಖಬೆಲೆಯ ಈ ಪುಸ್ತಕವನ್ನು ಪ್ರಕಟಣಾ ಪೂರ್ವದಲ್ಲಿ ಬೇಡಿಕೆ ಸಲ್ಲಿಸುವ ಓದುಗರಿಗೆ ೧೦೦ ರೂಗಳಿಗೆ ಅವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ರೂಪಿಸಿದೆ.
ವಿವರಗಳನ್ನು ಪ್ರತ್ಯೇಕವಾಗಿ ನೀಡುವೆ.

#ಅಲೆಮಾರಿಯ_ಪ್ರವಾಸ_ಕಥನಗಳು

ಮುರಳಿ ಕೃಷ್ಣ ಮಡಿಕೇರಿ

ನಿಮ್ಮ ಟಿಪ್ಪಣಿ ಬರೆಯಿರಿ