ಕನ್ನಡ · ಕೆ.ವಿ.ಅಯ್ಯರ್ · Uncategorized

‘ಸಮುದ್ಯತಾ’ – ಕೆ.ವಿ.ಅಯ್ಯರ್

ಈ ದಿನ ಶ್ರೀಯುತ ಕೆ.ವಿ.ಅಯ್ಯರ್ ರವರ ಸಣ್ಣ ಕತೆಗಳ ಸಂಗ್ರಹ ” ಸಮುದ್ಯತಾ ” ಓದಿದೆ. ಎಲ್ಲಾ ಕತೆಗಳು ಬಹಳ ಚನ್ನಾಗಿದೆ. ಈ ಪುಸ್ತಕಕ್ಕೆ ಶ್ರೀಯುತ ಜಿ.ಪಿ.ರಾಜರತ್ನಂ ರವರ ಮುನ್ನುಡಿ ಓದಿದ ಮೇಲೆ, ಶ್ರೀಯುತ ಕೆ.ವಿ.ಅಯ್ಯರ್ ರವರ ಬಗ್ಗೆ ಸಾಕಷ್ಟು ವಿಷಯ ತಿಳಿಯಿತು. ಅದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕು ಎಂದು ಅನಿಸಿತು.
ಒಂದು ದಿನ ಅಯ್ಯರ್ ರವರು ರಾಜರತ್ನಂ ಬಳಿ ಬಂದು “ಇದನ್ನು ಓದಿ” ಎಂದು ಒಂದು ನೋಟ್ ಬುಕ್ ಕೊಟ್ಟು ಓದಿ ಅಂದರಂತೆ. ಒಂದೆರಡು ಪುಟ ತಿರಿವಿ ನೋಡಿದಾಗ, ಏನೋ ಕತೆ ಇದ್ದ ಹಾಗಿದೆ ” ಇವರಿಗೆ ಯಾಕಪ್ಪ ಈ ಹುಚ್ಚು ಹಿಡಿಯಿತು ” ಅಂತ ಅನ್ನಿಸಿತಂತೆ. ಕೋಳಿ ಕೆದಕಿದಂತೆ ನೊಡಿದ ಕೆಲವು ಪುಟಗಳಲ್ಲಿ ಅವರಿಗೇನೂ ರುಚಿ ಕಾಣಲಿಲ್ಲವಂತೆ. ಹಾಗೆಂದು ಅಲ್ಲೇ ಹೇಳಿಬಿಡುವುದು ಹೇಗೆಂದು ನಾಲಿಗೆ ನುಂಗಿಕೊಂಡರಂತೆ. ಸುಮಾರು ಒಂದೂವರೆ ವರ್ಷ ಅದನ್ನು ಅವರಿಗೆ ಓದಲಾಗಲಿಲ್ಲವಂತೆ.
ಕೆಲವು ವರ್ಷಗಳ ನಂತರ ಅನಿರೀಕ್ಷಿತವಾಗಿ ಭೇಟಿ ಆದಾಗ , ಒಂದು ಸಣ್ಣಕತೆ ಓದಿ ಹೇಳುತ್ತೀನಿ ಎಂದು ಓದತೊಡಗಿದರಂತೆ. ಆ ಸಂಜೆ ಅಯ್ಯರ್ ಓದಿದ ಕತೆ ಅವರ ಮನಸ್ಸು ಕರಗಿಸಿತಂತೆ. ಆ ಕತೆ ಕೈಲಾಸಂ ರವರ ತಾವರೆಕೆರೆಗೆ ಎಣೆಯಾಗಿ ನಿಲ್ಲಬಹುದು ಅನ್ನಿಸಿತಂತೆ.ಆಗ ಅವರು ಹಿಂದೆ ಕೊಟ್ಟಿದ್ದ ನೋಟ್ ಬುಕ್ ಅವರಿಗೆ ಹಿಂತಿರಿಗಿಸಿ ಇದನ್ನು ಅಚ್ಚಿಗೆ ಕೊಡುವಂತೆ ಬರೆದು ಕೊಡಿ, ಚನ್ನಾಗಿದ್ದರೆ ಪ್ರಕಟಿಸೋಣ ಎಂದು ಹೇಳಿದರಂತೆ.. ಒಂದೆರಡು ತಿಂಗಳೊಳಗಾಗಿ ಅದನ್ನು ಬೆಳಸಿ ಬರೆದ ಹಸ್ತಪ್ರತಿ ನೋಡಿ ಅವರಿಗೆ ವಿಸ್ಮಯ ಆಯಿತಂತೆ ಕುತೂಹಲದಿಂದ ಓದಲು ಕೈಗೆತ್ತಿಕೊಂಡ ಮೇಲೆ ಮುಗಿಸುವರೆಗೂ ಅದು ಅವರ ಕೈ ಬಿಡಲಿಲ್ಲವಂತೆ.
ಮೈಸೂರಿನ ಉಪಾ ಸಾಹಿತ್ಯಮಾಲೆಯವರು ಇದನ್ನು 1950 ಇದನ್ನು ಪ್ರಕಟಿಸಿದಾಗ ಈ ಕಾದಂಬರಿಯ ಗುಣವನ್ನು ಮೆಚ್ಚಿಕೊಂಡ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಪಠ್ಯ ಪುಸ್ತಕ ಸಮಿತಿಯವರು ಇದನ್ನು ಡಿಗ್ರಿ ಪರೀಕ್ಷೆಗಳಿಗೆ ಪಠ್ಯವಾಗಿ ಆರಿಸಿದರಂತೆ. ” ಇವರಿಗೆ ಯಾಕಪ್ಪಾ ಈ ಹುಚ್ಷು ಹಿಡಿಯಿತು” ಎಂದು ಹಿಂದೆ ಹೇಳಿಕೊಂಡಿದ ರಾಜರತ್ನಂರವರೇ ಈಗ ಈ ಕಾದಂದಬರಿಯನ್ನು ರಸಾನಂದದಿಂದ ಅವರ ವಿದ್ಯಾರ್ಥಿಗಳಿಗೆ ಪಾಠ ಹೇಳಬೇಕಾಯಿತಂತೆ. ಈ ಕಾದಂಬರಿ ಬರೆದಾಗ ಅದಕ್ಡೆ ಹೆಸರೇ ಇಟ್ಟಿರಲಿಲ್ಲವಂತೆ. ಕಡೆಗೆ ಕಾದಂಬರಿಗೆ ತಕ್ಕ ಹೆಸರು ಕಾದಂಬರಿ ಒಳಗೇ ಕುಳಿತಿದೆ ಅಂತ ” ರೂಪದರ್ಶಿ ” ಎಂದೇ ನಾಮಕರಣವಯಿತಂತೆ. ಈ ಕಾದಂಬರಿಯ ಜೊತೆಗೆ “ರೂಪದರ್ಶಿ” ಹೆಸರು ಕೂಡ ಅಯ್ಯರ್ರವರು ಕನ್ನಡಕ್ಕೆ ಕೊಟ್ಟ ಅಪೂರ್ವವಾದ ಕೊಡುಗೆ ಎಂದು ಹೇಳುತ್ರಾರೆ( ಅವರ ಕಾದಂಬರಿಗಳನ್ನು ಓದಿದ ವಾಚಕರು ಸಹ ಇದೇ ಅಬಿಪ್ರಾಯ ಎಂದು ನನ್ನ ನಂಬಿಕೆ)
ಇವರ ಕೈಗುಣ ತಿಳಿದ ಮೇಲೆ ಕೈಲಾಸಂ ಮತ್ತು ಅಯ್ಯರ್ ರವರಿಗಿಂದ ಆಪ್ತ ಸಂಬಂದ ಚಿತ್ರಿಸಿ ಎಂದು ಅವರನ್ನು ಒಪ್ಪಿಸಿ “ಕೈಲಾಸಂ ಸ್ಮರಣೆ” ಪ್ರಕಟಿಸಿದಾಗ, ಆ ಪುಸ್ತಕಕ್ಕೆ ಮುನ್ನುಡಿ ಬರೆದ ಮಾನ್ಯ ಡಿ.ವಿ.ಜಿ.ಯವರು ” ” ಗದೆಯನ್ನು ಹೇಗಂದರೆ ಹಾಗೆ ತಿರುಗಿಸಬಲ್ಲ ಕೈ ಲೇಖಣಿ ಯನ್ನೂ ಹಾಗೇ ತಿರುಗಿಸಬಲ್ಲದೆಂಬ ಸಂಗತಿ ” ಈ ಪ್ರಕರಣದಿಂದ ವ್ಯಕ್ತ ವಾಯಿತು ಎಂದು ಬರೆದಿದ್ದಾರಂತೆ.(ಅಯ್ಯರ್ ವ್ಯಾಯಾಮ ಶಾಲೆ ನಡೆಸುತ್ತಿದ್ದರು)
ಇದಾದ ಕೆಲವು ತಿಂಗಳು ಕಳೆದ ಮೇಲೆ ಅಯ್ಯರ್ ರವರು ಒಂದು ಮದ್ಯಾನ ಉರಿ ಬಿಸಿಲಿನಲ್ಲಿ ರಾಜರತ್ನಂ ರವರಮನೆಗೆ ಬಂದಾಗ ಅವರು ಯಾವುದೊ ಉದ್ವೇಗದಲ್ಲಿರುವಂತೆ ಕಂಡಿತಂತೆ. ನಂತರ ತಾವು ಕಂಡ ಒಂದು ಕನಸನ್ನು ವಿವರವಾಗಿ ನಡಗುವ ದ್ವನಿಯಲ್ಲಿ ಹೇಳತೊಡಗಿದರಂತೆ.
” ಶ್ರವಣಬೆಳಗೊಳದ ಗೋಮಟೇಶ್ವರನು ಹಳೇಬೀಡಿನ ಈಶ್ವರಾಲಯಕ್ಕಾಗಿ ಎರಡು ಮಹಾನಂದಿಗಳನ್ನು ನಡಿಸಿಕೊಂಡು ಬಂದ ಕತೆ ಈ ಕನಸಿನ ವಸ್ತು. ಇದನ್ನು ಬರೆದರೆ ಒಳ್ಳೆಯ ಕತೆಯಾಗುತ್ತೆಂದು ಸೂಚಿಸಿದಮೇಲೆ ಹೃದಯದ ಹೊರೆ ಇಳಿಸಿಕೊಂಡವರ ಹಾಗೆ ಮನೆಗೆ ಹೊರಟರಂತೆ.
ಸ್ವಲ್ಪ ಕಾಲದ ನಂತರ ಅವರು ರಾಜರತ್ನಂ ಬಳಿ ಬಂದು ತಾವು ಆರಂಬಿಸಿದ ” ಶಾಂತಲಾ” ಕಾದಂಬರಿ ಓದಿದರಂತೆ. ಇತಿಹಾಸದ ವಸ್ತುವನ್ನು ಎತ್ಕಿಕೊಂಡು ಅದರ ಆದಾರದ ಮೇಲೆ ಹೊಸ ರಚನೆ ಮಾಡ ಬೇಕೆಂದರೆ ಎಷ್ಟು ವ್ಯಾಸಂಗ ,ಎಷ್ಟು ಅಬ್ಯಾಸ,ಎಷ್ಟು ಚಿಂತನ ಮನನ ಆಗಬೇಕು ಎಂಬುದು ತಿಳಿದಿದ್ದ ರಾಜರತ್ನಂಗೆ, ಅಯ್ಯರ್ ವಹಿಸಿದ ಭಾರವನ್ನು ನೋಡಿದಾಗ, ” ಒಂದ ಶಾಸ್ತ್ರ ದಲ್ಲಿ ಪಾರಂಗತ ಆದವರಿಗೆ ಇನ್ಮೊಂದು ಶಾಸ್ತ್ರದಲ್ಲಿ ಪ್ರಾವೀಣ್ಯ ಪಡಯುವುದರಲ್ಲಿ ಏನು ಆಶ್ಚರ್ಯ , ಅಂದು ಅವರು ಹೇಳಿದ ಕನಸಿನ ಕತೆ ಶಾಂತಲಾ ಕಾದಂಬರಿಯಲ್ಲಿ ” ಕುವರ ವಿಷ್ಣುವಿನ ಕನಸಾಗಿ” ಸಮಾವೇಶಗೊಂಡಿತು.ಎಂದು ಹೇಳುತ್ತಾರೆ. ಮತ್ತೆ ಅಯ್ಯರವರು “ಶಾಂತಲಾ” ಕಾದಂಬರಿಯನ್ನು ರಚಿಸಿದರೊ, ಅಥವಾ ಶಾಂತಲಾ ಕಾದಂಬರಿ ಅವರನ್ನು ರೂಪಿಸಿತೋ ಹೇಳುವುದು ಕಷ್ಟ ಎನ್ನುತ್ತಾರೆ ಅವರ ಕೃತಿಗಳಲೆಲ್ಲಾ ” ಶಾಂತಲಾ ” ಹೆಚ್ಚು ಮಾನ್ಯತೆ ಪಡೆದಿದೆ ಎನ್ನುತ್ರಾರೆ. ಪ್ರಕಟವಾದ ಮರು ವರ್ಷವೇ ಅದೂ ಸಹ ಡಿಗ್ರಿ ಪರಿಕ್ಷೆಗೆ ಪಠ್ಯ ಪುಸ್ತಕ ಆಯಿತಂತೆ. ಇದನ್ನು ಆಕಾಶವಾಣಿಯವರು ನಾಟಕ ರೂಪಕ್ಕೆ ಅಳವಡಿಸಿಕೊಂಡು ಪ್ರಸಾರ ಮಾಡಿದ್ದಾರೆ. ಮತ್ತೆ ಶ್ರೀ ಯು.ಎಸ್ ಕೃಷ್ಣರಾಯರು ಮತ್ತು ಅವರ ಸತಿ ಶ್ರೀಮತಿ ಚಂದ್ರಬಾಗಾದೇವಿಯವರೂ “ಶಾಂತಲಾ” ಕಾದಂಬರಿಯನ್ನು ಅಯ್ಯರ್ ರವರ ನೆರವಿನಿಂದ ನೃತ್ಯ ರೂಪಕ್ಕೆ ಅಳವಡಿಸಿಕೊಂಡು, ಅದನ್ನು ಲಂಡನ್ನಿನಲ್ಲಿ ಅನೇಕ ಸಲ ಪ್ರದರ್ಶಿಸಿ,ಅಲ್ಲಿನ ಜನಕ್ಕೆ ರಸಾನಂದವನ್ನು ಬೀರಿದ್ದಾರೆ. ಭಾರತದ ಸಾಹಿತ್ಯ ಅಕಾಡೆಮಿಯವರು ಇದುವರೆಗೆ ಹಿಂದಿ, ತೆಲುಗು, ತಮಿಳು ಬಾಷೆಗಳಿಗೆ ಅನುವಾದವಾಗಿದೆ.ಬೇರೆ ಬಾಷೆಗಳಿಗೂ ಅನುವಾದವಾಗುತ್ತಿದೆಯಂತೆ..
ಈ ಸಂಗ್ರಹ ದಲ್ಲಿನ ಕತೆಗಳಲ್ಲಿ ಒಂದಾದ” ಸಮುದ್ಯತಾ” ಹೆಸರು ಎಲ್ಲಿ ಸಿಕ್ಕಿತು ಎಂದು ಕೇಳಿದಾಗ, ದೇವತಾಕಾರ್ಯೆ ಸಮುದ್ಯತಾ” ಎಂದು ಲಲಿತಾ ಸಹಸ್ರನಾಮದಲ್ಲಿ ಎಂದು ಹೇಳಿದರಂತೆ. ಆಗ ಅವರು ಸ್ವಾಮಿ ಆದಿದೇವಾನಂದರ “ಶ್ರೀಲಲಿತಾಸಹಸ್ರನಾಮಭಾಷ್ಯ” ಓದಿ ವಿವರವಾಗಿ ತಿಳಿದು ಕೊಂಡರಂತೆ.
ವಿಮರ್ಶೆ ಹೆಸರಿನಲ್ಲಿ ನಾವು ಒಂದು ಅನ್ಯಾಯ ಮಾಡುತ್ತಿದ್ದೆವೆ ಎನಿಸುತ್ತದೆ. ಆದಿಕವಿ ವಾಲ್ಮಿಕಿಯಿಂದ ಹಿಡಿದು ಅಂತ್ಯಕವಿ ಯಾವನೇ ಆಗಲಿ ನೂರರಲ್ಲಿ ಎಲ್ಲರಿಗೂ ಆ ನೂರೂ ಏಕಪ್ರಕಾರವಾಗಿ ರುಚಿಸುತ್ತದೆ ಎಂದು ಹೇಳುವಂತಿಲ್ಲ. ಆದರೆ ವಿಮರ್ಶೆ ವಿಪರೀತಕ್ಕೆ ಹೋದರೆ, ಅಪ್ಪ ಮಗ ಕತ್ತೆ ಹೊತ್ತ ಕತೆಯಾಗುತ್ತದೆ. ಅದಕೋಸ್ಕರವೇ ” ಬೀಳಿಸದಿರೆಲೋ ನೆರಳನಿತರರ ಮೇಲೆ” ಎಂದು ಮಂಕುತಿಮ್ಮ ಹೇಳಿದ್ದು.
ಇನ್ನು ಅಯ್ಯರ್ ರವರು ತಮ್ಮ ಬರಹದ ಬಗ್ಗೆ ಹೇಳಿದ ಮಾತು.” ಬರವಣಿಗೆ ನನ್ನ ವೃತ್ತಿಯಲ್ಲ ನನ್ನ ವೃತ್ತಿಯಲ್ಲಿ ಬರವಣಿಗೆಗೆ ಹೆಚ್ಚು ವ್ಯವದಾನ ಇಲ್ಲ. ಕಾಯಕವೇ ನನ್ನ ಪಾಲಿಗೆ ಬಂದದ್ದು. ಅದೇ ನನಗೆ ಹಸಿವು ನಿದ್ದೆ ಆರೋಗ್ಯಗಳನ್ನು ಕೊಟ್ಟಿದ್ದು. ಅದಕ್ಕೆ ಉಪಾಂಗ ಗಳಾಗಿ ಬೆಳೆದುಕೊಂಡದ್ದು‌ ವ್ಯಾಯಾಮ ಮತ್ತು ಚಿಕಿತ್ಸಾವಿದಾನ.
ದಿವಂಗತ ಕೈಲಾಸಂರವರು ಹಿಂದೆಯೇ ನನ್ನನ್ನು ಒಮ್ಮೆ ಹೀಗೆಂದು ಎಚ್ಚರಿಸಿದ್ದರು. ” ದಿನವೂ ಒಂದೆರಡು ಗಂಟೆಗಳ ಕಾಲವಾದರೂ ನಿನ್ನ ವೃತ್ತಿ ವಿಚಾರದ ಪುಸ್ತಕಗಳನ್ನೂ ವಿದ್ವಾಂಸರು ವಿಚಾರಶೀಲರೂ ವಿಜ್ಞಾನಿಗಳು ಬರೆದಿರುವ ಪುಸ್ತಕಗಳನ್ನೂ ಚನ್ನಾಗಿ ಓದು ಬರೀ ” ವಿಟ್ಟಿಶ್ಯದೆ ವೆಂಕಟೇಶ್ ಆಗಬೇಡ” ಎಂದು. ” ಓದುತ್ತೇನೆ” ಎಂದು ಅವರಿಗೆ ಮಾತು ಕೊಟ್ಟಿದ್ದೆ. ಅಂತೆಯೆ ನಡೆದುಕೊಂಡು ಬಂದ್ದಿದ್ದೇನೆ.
ಓದುವ ಚಟ ಹೆಚ್ಚಾದಂತೆಲ್ಲಾ ಬರೆಯಲು ನಾಚಿಕೆ ಹೆಚ್ಚುತ್ತಿತ್ತು. ನಾನು ಏನಾದರೂ ಬರಿಯೋಣವೆ” ಎಂದು ಯಾವಾಗಲಾದರು ಎನಿಸಿದರೆ” ಆ ಮಸಿಯನ್ನು ನಿನ್ನಮುಖಕ್ಕೆ ಬಳಿದಿಕೊ,……ಪೆದ್ದ” ಎನ್ನುತ್ತಿತ್ತು ಮನಸ್ಸು. ಜನುಮ ಜನುಮಗಳ ಸಾದನೆ ಇದ್ದರೆ ಮಾತ್ರ ಈ ಸಿದ್ದಿ.
ಏನೇ ಎನಿಸಿದರೂ,ಸುಮ್ಮನೆ ಕೈಕಟ್ಟಿ ಕುಳಿತಿರಲು ಸಹ ನನ್ನಿಂದ ಆಗಲಿಲ್ಲ..,.ಆಗುತ್ತಿಲ್ಲಾ. ತಾಗಿದ ಒಂದು ಅನುಭವ,ಕೇಳಿದ ಒಂದು ವಿಷಯ ತಲೆಯಲ್ಲಿ ಒಳಹೊಕ್ಕು ಕುಳಿತುಬಿಟ್ಟು , ಅದು ಅಲ್ಲಯೆ ಬೇರೂರಿ, ಬೆಳೆದು,ಅನಂತರ ಹೊರಕ್ಕೆ ಬರಲೇಬೇಕು ಅನಿಸುತ್ತದೆ. ಆಗ ಅದನ್ನು ಹೊರಚಲ್ಲಿದರೇನೆ ಮೈಗೆ ಮನಸ್ಸಿಗೆ ನೆಮ್ಮದಿ. ಈ ಸಮುದ್ಯತಾದಲ್ಲಿನ ಕೃತಿಗಳು ಹೀಗೆ ಹೊರಬಂದವೇ, ಕೆಲವೊಂದು ಯಾವುದೋ ಹಿಂದಿನ ಕಾಲದಲ್ಲಿ ಓದಿದ್ದ, ಅನುಭವಿಸಿದ್ದ ನೆನಪುಗಳದು. ಸಣ್ಣಕತೆಗಳೆ ಆದರೂ ರಸಪುಷ್ಟಿಯಾಗಿ ಬರೆಯುವುದು ಸುಲಭ ಕೆಲಸವಲ್ಲ ಹಲವೊಂದು ಕತೆಗಳು ನನ್ನ” ರೂಪದರ್ಶಿ ” ಶಾಂತಲಾ “ಗಳಷ್ಟೆ ಶ್ರಮ ಕೊಟ್ಟಿವೆ.
ಇಲ್ಲಿಯ ಕೃತಿಗಳು ಒಂದೊಂದು ಒಂದೊಂದು ಮಾದರಿಯವು. ಇವುಗಳಲ್ಲಿ” ಮನೆಯ ಮುಂದೆ ಮಕ್ಕಳು ” ಎಂಬ ನೈಜ್ಯ ಚಿತ್ರ .”ದೆಯ್ಯದ ಮನೆ” ನನ್ನ ಚಿಕ್ಕಂದಿನ ನೆನಪು.” ಚೇಳು ಬಂತು ಚೇಳು!!,” ವಿಷ ಬೆಳಸು” ಬೆಂಗಳೂರಿನ ಆಕಾಶವಾಣಿ ಯವರಿಂದ ಏಕಾಂಕ ರೂಪಕಗಳಲ್ಲೂ ಪ್ರಸಾರ ಮಾಡಲ್ಪಟ್ಟಿದೆ. ” ಜೆನ್ನಿ” ನನ್ನ ಜಿವನದಲ್ಲಿ ನಾನು ಮರೆಯಲಾಗದ ಒಂದು ಅನುಭವ. ” ಅವರವರ ಹುಚ್ಚು ಅವರವರಿಗೆ ಸಂತೋಷ” ಎನ್ನುವುದಾದರೆ, ಈ ಕತೆಗಳು ನನಗೆ ತುಂಬು ಸಂತೋಷ ಕೊಟ್ಟಿವೆ. ಸಹೃದಯರಾದ ತಮಗೂ ಸಂತೋಷವನ್ನು ಕೊಟ್ಡಾವು ಎಂಬ ಆಶೆಯಿಂದ ಇವುಗಳನ್ನು ತಮ್ಮ ಮುಂದೆ ಇಟ್ಟಿದ್ದಿನಿ. ಎಂದು ಬರೆದಿದ್ದಾರೆ.

ಶ್ರೀಧರ ಅನಂತಸ್ವಾಮಿ ರಾವ್

ನಿಮ್ಮ ಟಿಪ್ಪಣಿ ಬರೆಯಿರಿ