ಕನ್ನಡ · ವಸಂತಪೋತದಾರ · ಶುಭದಾ ಅಮಿನಭಾವಿ · Uncategorized

‘ಭೀಮಸೇನ’ – ವಸಂತ ಪೋತದಾರ/ ಶುಭದಾ ಅಮಿನಭಾವಿ

ಭೀಮಸೇನ – ವಸಂತ ಪೋತದಾರ/ ಶುಭದಾ ಅಮಿನಭಾವಿ

ಪಂಡಿತ ಭೀಮಸೇನ ಜೋಷಿ ಅವರ ಸಂಗೀತ ಅಂದರೆ ಸಮುದ್ರದ ಅಲೆಗಳು ಬಂದು ದಡಕ್ಕೆ ಬಡಿಯುತ್ತವಲ್ಲ ಹಾಗೆ..ಅದೇ ಮೊರೆತ..
ಅಂತಹವರ ಬದುಕಿನ, ಸಂಗೀತದ ಯಾತ್ರೆಯ ಕುರಿತು ತಿಳಿವ ಕುತೂಹಲ ಸಹಜವೇ. ಗುಲ್ಜಾರ್ ಕೃತ ಅವರ ಬಗೆಗಿನ ಸಾಕ್ಷ್ಯಚಿತ್ರ ಸ್ವಲ್ಪ ಸಹಾಯ ಮಾಡಿದರೂ, ಈ ಪುಸ್ತಕ ತುಣುಕು ತುಣುಕಾಗಿ ಅವರ ಬಗೆಗಿನ ಮಾಹಿತಿ ಒದಗಿಸುತ್ತದೆ.
ಸಂಗೀತ ಕಲಿಯುವ ಆಸೆಯಿಂದ ಮನೆಯಿಂದ ಓಡಿಹೋದ ಬಾಲಕ‌ ಭೀಮಸೇನರ ಸುತ್ತಾಟಗಳು, ಅವರ ಬಗೆಗೆ ಸಮಕಾಲೀನರ, ಅವರ ಗಾನ ಸವಿದವರ ಅನಿಸಿಕೆಗಳು ,ಅವರ ಆಸಕ್ತಿಗಳು ಇವುಗಳ ಬಗ್ಗೆ ಓದಲು ಹಿತವಾದ ಮರಾಠಿ ಮಿಶ್ರಿತ ಕನ್ನಡದಲ್ಲಿ ಈ ಪುಸ್ತಕ ಬಂದಿದೆ.
ಅವರ ವೈಯಕ್ತಿಕ ಜೀವನ ಹಾಗೂ ವ್ಯಸನಗಳ ಬಗ್ಗೆ ಕ್ವಚಿತ್ತಾಗಿ ಪ್ರಸ್ತಾಪ ಮಾಡಿದ್ದು ಬಿಟ್ಟರೆ ಹೆಚ್ಚೇನಿಲ್ಲ.
ಇದು ಸಮಗ್ರ ಜೀವನಕಥೆ ಅಲ್ಲ.
ಆದರೆ ಸಹೃದಯೀ ಓದುಗನಿಗೆ,ರಸಾಸ್ವಾದಕನಿಗೆ ಏನು ಬೇಕೋ ಅದೆಲ್ಲವೂ ಇಲ್ಲಿದೆ.

-ಪ್ರಶಾಂತ ಭಟ್

ನಿಮ್ಮ ಟಿಪ್ಪಣಿ ಬರೆಯಿರಿ