Uncategorized

‘ಕನಕ ಮುಸುಕು’ – ಗಣೇಶಯ್ಯ

ಪುಸ್ತಕ. : ಕನಕ ಮುಸುಕು
ಲೇಖಕರು: ಕೆ.ಎನ್.ಗಣೇಶಯ್ಯ
ಪ್ರಕಾಶನ : ಅಂಕಿತ ಪುಸ್ತಕ
ಬೆಲೆ : ರೂ150/-

ನಾನು ಓದಿದ ಕೆ.ಎನ್.ಗಣೇಶಯ್ಯರವರ ಮೊದಲ ಕಾದಂಬರಿ ಇದು. ಸರಳ ಭಾಷೆ, ಎಲ್ಲಿಯೂ ಕೊಂಚುವು ಬೇಸರ ಎನ್ನಿಸದಂತೆ ಕೊನೆಯವರೆಗೂ ಕುತೂಹಲದಿಂದ ಓದಿಸಿಕೊಂಡು ಹೋಗುವ ಐತಿಹಾಸಿಕ, ಪತ್ತೆದಾರಿ, ಸಂಶೋಧನಾತ್ಮಕ, ವೈಜ್ಞಾನಿಕವಾದ ರೋಚಕ ಕಾದಂಬರಿಗಳಲ್ಲೊಂದು ಎನ್ನಬಹುದು..

ಜೋಡಿ ಕೊಲೆಗಳ ಮೂಲಕ ಪ್ರಾರಂಭವಾಗುವ ಕಾದಂಬರಿ, ಮುಂದುವರೆಯುವ ಪ್ರಮುಖ ಪಾತ್ರ ಅಂದರೆ ಪೂಜಾ ಎಂಬ ಸಂಶೋಧನಾ ವಿಧ್ಯಾರ್ಥಿನಿಯಿಂದ. ವಿದೇಶಕ್ಕೆ ಸಂಶೋಧನೆಗೆ ತೆರಳುತ್ತಾಳೆ.ಸಂಶೋಧನೆ ನೆಪ ಮಾತ್ರಕ್ಕೆ, ಅಲ್ಲಿ ಹೋಗಿರುವುದು ಜೈನ ಧರ್ಮ ಪ್ರಚಾರದ ವೇಳೆ ಹಿಂದಿನ ರಾಜರುಗಳು ಹಾಗೂ ಜೈನ ಮುನಿಗಳು ಅಡಗಿಸಿಟ್ಟ ನಿಧಿಯ ಬಗ್ಗೆ ನಿಖರವಾದ ಮಾಹಿತಿಗಳನ್ನು ಶೋಧನೆ ಮಾಡಲು. ಬಹುತೇಕ ಮಾಹಿತಿ ಪಡೆಯುವಷ್ಟರಲ್ಲಿ ಭೂಗತ ಲೋಕದ ವ್ಯಕ್ತಿಗಳು ಅವಳ ಹಿಂದೆ ಬಿದ್ದಿರುವುದು ತಿಳಿವುದು.

ಅಷ್ಟರಲ್ಲೇ ಭಾರತದ ಜೈನ ಸಂಘದ ಪ್ರವೇಶವಾಗುತ್ತದೆ. ಬ್ರಹ್ಮ ಪ್ರಸಾದ ಅದರ ಮುಖ್ಯಸ್ಥ. ಬ್ರಹ್ಮ ಪ್ರಸಾದ ಮತ್ತೊಬ್ಬರನ್ನ ಆಕರ್ಷಿಸುವ ವ್ಯಕ್ತಿತ್ವ. ಜೈನ ಧರ್ಮದ ಬಸದಿಗಳು ಹಾಗೂ ಅದರ ನಿಧಿ ಶೋಧನೆ ಮಾಡುವಂತವರ ಬಗ್ಗೆ ಜಾಲ ರಚಸಿ ಅವುಗಳನ್ನು ರಕ್ಷಿಸುವ ಕಾರ್ಯಮಾಡುವುದಾಗಿ ಕಂಡು ಬಂದರು ಕೊನೆಯವರೆಗೂ ಅವರ ನಡೆ ಏನಾಗಿರಬಹುದು ಎಂಬುದನ್ನು ಓದುಗನಿಗೆ ಬಿಡಲಾಗಿದೆ.

ಇನ್ನೂ ಕಾದಂಬರಿಯಲ್ಲಿ ಬರುವ ವಿಶಿಷ್ಟ ಅಂಶಗಳೆಂದರೆ ನಕ್ಷೆಯ ಚಿತ್ರಗಳು, ಸಿರಿವನ ಬೆಳ್ಳಕೊಳ ಹೋಗಿ ಶ್ರವಣಬೆಳಗೊಳ ಆಗಿದ್ದು, ಆ ಕಾಲದ ಕನ್ನಡದ ಅಂಕಿಗಳು , ಶಿಲ್ಪ ಕಲೆಯಲ್ಲಿ ಗೋವಿನಜೋಳ ಹಿಡಿದ ಬಾಲೆ ಮತ್ತು ಅದರ ಇತಿಹಾಸ, ಬಂಗಾರದ ಗೋವಿನಜೋಳದ ತೆನೆಗಳು, ಜೈನ ಮುನಿಗಳ ತಪಸ್ಸು, ಬಸದಿಗಳ ಮತ್ತು ಅದರ ನಿಧಿ ರಕ್ಷಣೆ, ಭೂಗತಲೋಕದ ನೆರಳು, ಪತ್ತೆದಾರಿಕೆ, ಜೋಡಿ ಕೊಲೆಗೆ ಕಾರಣ, ಇತರೆ. ಕಾದಂಬರಿಯ ಉದ್ದಕ್ಕೂ ಸಾಕಷ್ಟು ವಿಷಯಗಳನ್ನು ಒಂದೆ ತಟ್ಟೆಯಲ್ಲಿ ಸಮರ್ಪಕವಾಗಿ ಅಗತ್ಯವಾದ ರುಚಿಯೊಂದಿಗೆ ಬಡಿಸಿರುವುದರಿಂದ ಓದುಗನು ಗಣೇಶಯ್ಯ ಸರ್ ಅಭಿಮಾನಿಯಾಗುವುದರಲ್ಲಿ ಸಂಶಯವಿಲ್ಲ.

ಧನ್ಯವಾದಗಳು…

ಸಂಶಿಕ

ನಿಮ್ಮ ಟಿಪ್ಪಣಿ ಬರೆಯಿರಿ