ಕನ್ನಡ - ಅನುವಾದಿತ · ಕುಮುದಪ್ರಿಯ · Uncategorized

‘ವಚನ ಶ್ರೀ ದೇವಿ ಮಹಾತ್ಮೆ’ – ಕುಮುದಪ್ರಿಯ

FB_IMG_1540528626241.jpg

ಪುಸ್ತಕ : ವಚನ
ಶ್ರೀ ದೇವಿ ಮಹಾತ್ಮೆ
ಮೂಲ : ಶ್ರೀ ಕಾಳಿಕಾಪುರಾಣವೆಂಬ ದೇವೀ ಮಹಾತ್ಮೆ
ಅನುವಾದಕರು : ಕುಮುದಪ್ರಿಯರು
ಪ್ರಕಾಶಕರು : ಟಿ. ಎನ್. ಕೃಷ್ಣಯ್ಯ ಶೆಟ್ಟಿ ಅಂಡ್ ಸನ್

ನವರಾತ್ರಿ ಹಬ್ಬವೆಂದರೆ ಸಡಗರವೇ… ನವರಾತ್ರಿಯೆಂದ ಕೂಡಲೇ ನೆನಪಾಗುವುದು ಮೈಸೂರು… ನವರಾತ್ರಿ ಹಬ್ಬವೂ ದುರ್ಗದೇವಿಯ ಮಹಾತ್ಮೆಯನ್ನು ತಿಳಿಸುವಂತಹದ್ದು… ಈ ಒಂಭತ್ತು ದಿನಗಳಲ್ಲಿ ಮುತ್ತೈದೆಯರು ಕಲಶವನ್ನು ಪ್ರತಿಷ್ಠಾಪಿಸಿ, ಗೊಂಬೆಗಳನ್ನು ಕೂರಿಸಿ, ದೇವಿಗೆ ಅಲಂಕಾರವನ್ನು ಮಾಡಿ ಪೂಜಿಸುತ್ತಾರೆ… ಆ ಸಮಯದಲ್ಲಿ ಈ ಶ್ರೀ ದೇವಿ ಮಹಾತ್ಮೆ ಪುಸ್ತಕವನ್ನು ಓದುವುದು ವಾಡಿಕೆ… ಇದರಲ್ಲಿ ಮಧು-ಕೈಟಭ ಅಸುರರನ್ನು ವಿಷ್ಣು ಸಂಹಾರಿಸುವ ರೀತಿ… ಮಹಿಷಾಸುರನನ್ನು ತಾಯಿ ಜಗನ್ಮಾತೆ ವಧಿಸುವ ರೀತಿ… ಶುಂಭ-ನಿಶುಂಭರನ್ನು ಸಂಹರಿಸುವುದನ್ನು ಸಹ ದೈವೀಕವಾಗಿ ಬರೆದಿದ್ದಾರೆ… ಹರಿ ಹರ ಬ್ರಹ್ಮಾದಿ ಎಲ್ಲರೂ ಸೇರಿ ತಾಯಿ ದುರ್ಗೆಯನ್ನು ಪರಿ ಪರಿಯಾಗಿ ಬೇಡಿ.. ಸ್ತುತಿಸಿ… ತಾಯಿ ಜಗನ್ಮಾತೆಯ ಕರುಣೆಗೆ ಪಾತ್ರರಾಗುತ್ತಾರೆ….
ಚಂಡ-ಮುಂಡರನ್ನು ಕೊಂದು ತಾಯಿ ತಾನೇ ಚಾಮುಂಡಿಯಾಗುತ್ತಾಳೆ… ರಕ್ತಾ ಬೀಜಾಸುರನನ್ನು ಕೊಲ್ಲಲು ತಾನೇ ಕಾಳಿಯ ಅವತಾರವನ್ನೇತ್ತುತ್ತಾಳೆ… ಮಹಿಷಾಸುರನನ್ನು ಕೊಂದ ತಾಯಿ ಮಹಿಷಾಸುರ ಮರ್ದಿನಿಯಾದಳು… ಶುಂಭ-ಶುಂಭನರನ್ನು ಕೊಂದು ದೇವಿ ಜಗ್ದರಕ್ಷಿಕೆ.. ಜಗನ್ಮಾತೆಯಾದಳು…
ಎಲ್ಲಾ ದುಷ್ಟರನ್ನು ಸಂಹಾರಿಸಿದ ದೇವಿ, ಲೋಕದ ಕಲ್ಯಾಣಕ್ಕಾಗಿ ಪಾರ್ವತಿಯಾಗಿ ಅವತಾರವನ್ನು ಪಡೆದು ಜಗತ್ಪಾಲಕನ ಅರ್ಧಾಂಗಿಯಾಗಿ ನಮ್ಮನ್ನು ಸದಾ ರಕ್ಷಿಸುತ್ತಿದ್ದಾಳೆ….
ಪರ್ವತ ರಾಜನ ಪುತ್ರಿಯಾಗಿ ಜನಿಸಿ ಪರಶಿವನ್ನು ಮದುವೆಯಾಗುವ ಮಹಾ ಪುಣ್ಯದ ಕಥೆಯೂ ಇದರಲ್ಲಿದೆ….
ಇಂತಹ ಪುಣ್ಯದ ದಿನಗಳಲ್ಲಿ ದಿನವೂ ಈ ಪುಸ್ತಕವನ್ನು ಪಠಿಸುತ್ತಾ ತಾಯಿ ಜಗದಾಂಬೆಯನ್ನು ಸ್ಮರಿಸುತ್ತಾ ಪುನೀತರಾಗುವ ಸದಾವಕಾಶ ನಮಗಿದೆ….
ತ್ರಿಮೂರ್ತಿಗಳೂ… ದೇವತೆಗಳೂ… ಮಹಾರ್ಷಿಗಳೂ… ಭಜಿಸಿದ ಜಗದಾಂಬೆಯನ್ನು ನಾವು ಭಜಿಸುವ….
ನಮೋ ಶ್ರೀ ದುರ್ಗ ದೇವಿಯೇ ನಮಃ
ಯಾ ದೇವಿ ಸರ್ವ ಭೂತೇಷು…
ಮಾತೃ ರೂಪೇಣ ಸಂಸ್ಥಿತಃ….

ಧನ್ಯವಾದಗಳು
ದೇವಿ ಶ್ರೀ ಪ್ರಸಾದ್