ಕನ್ನಡ - ಅನುವಾದಿತ · ಗೋರೂರು ರಾಮಸ್ವಾಮಿ ಅಯ್ಯಂಗಾರ್ · Uncategorized

‘ಭಗವಾನ್ ಕೌಟಿಲ್ಯ’ – ಗೊರೂರು ರಾಮಸ್ವಾಮಿ ಅಯ್ಯಂಗಾರ್

FB_IMG_1536510000182.jpg

ದಿನಕ್ಕೊಂದು ಪುಸ್ತಕ ಪರಿಚಯ * ದಿನ – ೧

ಇದು ವಿಮರ್ಶೆ ಅಲ್ಲ, ಅನಿಸಿಕೆ ಅಭಿಪ್ರಾಯನೂ ಅಲ್ಲ, ನನ್ನ ಸಂಗ್ರಹದಲ್ಲಿ ಇರುವ ನೂರಾರು ಪುಸ್ತಕಗಳಲ್ಲಿ ಆಯ್ದಾ ಕೆಲವು ಪುಸ್ತಕಗಳ ನಾಲ್ಕು ಸಾಲಿನ ಪರಿಚಯವಷ್ಟೇ… ಇವತ್ತಿನ ಮೊದಲ ಪುಸ್ತಕ…
# “ಭಗವಾನ್ ಕೌಟಿಲ್ಯ”
ಗುಜರಾತಿ ಮೂಲ : ಕೆ.ಎಂ. ಮುನಷಿ
ಕನ್ನಡಾನುವಾದ : ಗೊರೂರು ರಾಮಸ್ವಾಮಿ ಅಯ್ಯಂಗಾರ್
ಪ್ರಕಾಶಕರು : ಐಬಿಎಚ್ ಪ್ರಕಾಶನ
77, 2ನೇ ಮುಖ್ಯ ರಸ್ತೆ,
ರಾಮರಾವ್ ಲೇಔಟ್,
ಬಿ. ಎಸ್. ಕೆ. 3ನೇ ಸ್ಟೇಜ್
ಬೆಂಗಳೂರು – 560 085.
ಬೆಲೆ : ₹ 165.

ಚಾಣಕ್ಯ ಚಂದ್ರಗುಪ್ತರ ಕಥೆ ಪ್ರಾಚೀನ ಕಾಲದಿಂದಲೂ ಭಾರತೀಯ ಕವಿಗಳನ್ನೂ ಲೇಖಕರನ್ನೂ ನಾಟಕಕಾರರನ್ನೂ ಆಕರ್ಷಿಸಿರುವ ಕಥೆ, ಪ್ರಸಿದ್ಧ ಸಂಸ್ಕೃತ ಕವಿಗಳು ಈ ವಿಷಯದ ಮೇಲೆ ನಾಟಕಗಳನ್ನು ಬರೆದಿದ್ದಾರೆ. ಕನ್ನಡದಲ್ಲಿರುವ ಮುದ್ರಮಂಜೂಷ ಜನಪ್ರಿಯವಾಗಿದೆ.
ಶ್ರೀ ಕೆ. ಎಂ. ಮುನ್ ಷಿಯವರು ಇದರಲ್ಲಿ ತಮ್ಮ ಕಲ್ಪನಾ ಸಾಮರ್ಥ್ಯವನ್ನು ಪ್ರಯೋಗಿಸಿದ್ದಾರೆ. ಇದರಲ್ಲಿ ನಂದರ ಕಾಲದ ಜೀವನ ಮನಮುಟ್ಟುವಂತೆ ಚಿತ್ರಿತವಾಗಿದೆ. ಇದಕ್ಕಿದ್ದಂತೆ ನಾವು ಎರಡು ಸಾವಿರ ವರ್ಷಗಳ ಹಿಂದಲ ಆರ್ಯವರ್ತಕ್ಕೆ ಹೋಗುತ್ತೆವೆ.*
(*ಅರಿಕೆ: ಗೊರೂರು ರಾಮಸ್ವಾಮಿ ಅಯ್ಯಂಗಾರ್).

ಉಮಾ ಶಂಕರ್

ಕನ್ನಡ · ಗೋರೂರು ರಾಮಸ್ವಾಮಿ ಅಯ್ಯಂಗಾರ್ · Uncategorized

‘ಗೋರೂರು ಅವರ ಬಾಲ್ಯದ ಆತ್ಮಕತೆ’ – ಗೋರೂರು ರಾಮಸ್ವಾಮಿ ಅಯ್ಯಂಗಾರ್

FB_IMG_1536311534327.jpg

ಗೋರೂರು ಅವರ ಬಾಲ್ಯದ ಆತ್ಮಕತೆ – ಐಬಿಎಚ್ ಪ್ರಕಾಶನ 2006 ರಲ್ಲಿ ಪ್ರಕಟಿಸಿದ ಪುಸ್ತಕ. 1904 ರಲ್ಲಿ ಜನಿಸಿದ ಗೋರೂರು ತಮ್ಮ ಬದುಕಿನ ನೋಟಗಳನ್ನು ಹೇಳಿದ ಕಾಲ ವಿಶೇಷವಾಗಿದೆ. ವಾಹನ ವ್ಯವಸ್ಥೆ ಇಲ್ಲದ ಆಗ ಮೈಸೂರಿನಿಂದ ಗೋರೂರರ ಅಜ್ಜ ನಾಲ್ಕು ದಿನ ಹಗಲು ರಾತ್ರಿ ಒಂದು ಎತ್ತಿನ ಮೇಲೆ ಪಯಣಿಸಿ ಊರಿಗೆ ಬಂದಿದ್ದರಂತೆ ! ದರ್ಜಿಗಳ ಕುಲ ಇಲ್ಲದಿದ್ದರೂ ಪರವಾಗಿಲ್ಲ ಎಂದು ಇವರ ತಂದೆ ಹೇಳಿದವರು. ಏಕೆಂದರೆ ಅವರು ಉಡುವುದಕ್ಕೆ , ಹೊಡೆಯುವುದಕ್ಕೆ ತಲಾ ಒಂದೊಂದು ಪಂಚೆ ಬಳಸುತ್ತಿದ್ದರು. ಅಂಗಿಯ ಬಳಕೆ ಇರಲಿಲ್ಲ. ಸೀಮೆ ಎಣ್ಣೆ ಖರೀದಿಯಲ್ಲಿ ಮುಕ್ಕಾಲು ರೂಪಾಯಿ ಉಳಿಸಲು ಮೂವತ್ತೆರಡು ಮೈಲಿ ಸಕಲೇಶಪುರಕ್ಕೆ ಪೊನ್ನನಾಥಪುರ ಅಯ್ಯಂಗಾರರು ನಡೆದು ಹೋದವರು. ಅರಕಲುಗೋಡು ಸೂರ್ಯನಾರಾಯಣ ಶೆಟ್ಟರು ಹೊಳೆಗೆ ಸೇತುವೆ ನಿರ್ಮಿಸಲು ಸರಕಾರಕ್ಕೆ ಸಾಲ ನೀಡಿದವರು. ಅರಿವೆಕಾಲಿನವರು( ಪೊಲೀಸರು ), ಬುರಡೆಹಬ್ಬ (ತಿಥಿ), ಮಟಪಳ್ಳಿ ​( ದೇವಸ್ಥಾನದ ಅಡುಗೆಮನೆ) ಹೀಗೆ ಮರೆತ ಪದಗಳ ನೆನಪು ಮಾಡುವ ಕೃತಿಯನ್ನು ಕಾಲ ಮಾನದ ಬಗ್ಗೆ ಆಸಕ್ತಿಯಿರುವ ಎಲ್ಲರೂ ಓದಬೇಕು.
ಮಾಹಿತಿ ನನ್ನ ಪರಿಸರದ ಮೇಷ್ಟ್ರಾದ ಶಿವಾನಂದ ಕಳವೆಯವರಿಂದ.

-ಆನಂದ ಕಿರಾಲು