ಜಿ.ಎಸ್.ಶಿವರುದ್ರಪ್ಪ

‘ಎರಡು ಪ್ರವಾಸ ಕಥನಗಳು’ – ಜಿ ಎಸ್ ಶಿವರುದ್ರಪ್ಪ

ಕೋಶಓದುತ್ತಾವಿದೇಶಸುತ್ತಿದಕಥೆ

ಪುಸ್ತಕದ ಹೆಸರು- ಎರಡು ಪ್ರವಾಸ ಕಥನಗಳು

ಲೇಖಕರು- ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ

ದೇಶ ಸುತ್ತು ಕೋಶ ಓದು ಅಂತಾ ಒಂದು ನಾಣ್ಣುಡಿ ಇದೆ..ಆದರೆ ದೇಶ ಸುತ್ತೋಕೆ ಪದೇ ಪದೇ ಆಗುವುದಿಲ್ಲ ಯಾಕಂದ್ರೆ ಅದಕ್ಕೆ ದುಡ್ಡು ಮತ್ತೆ ಸಮಯ ಎರಡು ಬೇಕು ಆದರೆ ಕೋಶ ಓದುತ್ತಾ ದೇಶ ಸುತ್ತಬಹುದು,ಕೋಶ ಓದುತ್ತಾ ದೇಶ ಸುತ್ತೋಕೆ ಪುಸ್ತಕ ಓದುವ ಹವ್ಯಾಸ ಮತ್ತೆ ಸ್ವಲ್ಪ ಸಮಯವಿದ್ದರೆ ಸಾಕು,ಹೌದು ಕೋಶ ಓದುತ್ತಾ ದೇಶ ಸುತ್ತುವುದು ಹೇಗೆಂದರೆ ಒಂದೊಳ್ಳೆ ಪ್ರವಾಸ ಕಥನವನ್ನು ಓದುವುದು,ಪ್ರವಾಸ ಕಥನವನ್ನು ಓದುತ್ತಾ ಹೋದಂತೆ ನಾವೇ ಪ್ರವಾಸ ಹೋಗ್ತಿದ್ವಿವೇನೋ ಅನ್ನೋ ಒಂದು ಮಜವಾದ ಅನುಭೂತಿ ಸಿಗುತ್ತಾ ಹೋಗುತ್ತೆ.. ನನಗೆ ಆ ರೀತಿಯ ಕೋಶ ಓದುತ್ತಾ ವಿದೇಶ ಸುತ್ತಿದ ಅನುಭೂತಿ ಕೊಟ್ಟ ಪುಸ್ತಕವೆಂದರೆ ರಾಷ್ಟ್ರಕವಿ
ಜಿ ಎಸ್ ಶಿವರುದ್ರಪ್ಪನವರ “ಎರಡು ಪ್ರವಾಸ ಕಥನಗಳು” ಪುಸ್ತಕ.

ಈ ಪ್ರವಾಸ ಕಥನ ಮಾಸ್ಕೊ ಮಹಾನಗರ(ರಷ್ಯಾ)ಮತ್ತೆ ಇಂಗ್ಲೇಡ್ ದೇಶಗಳ ಪ್ರವಾಸಕ್ಕೆ ಸಂಬಂದಿಸಿದ್ದು,ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರು ಪ್ರವಾಸ ಮಾಡಿದ ರಷ್ಯಾ ಮತ್ತೆ ಇಂಗ್ಲೇಡ್ ದೇಶದ ಬಗ್ಗೆ ಮನ ಮುಟ್ಟುವ ರೀತಿಯಲ್ಲಿ ಅಲ್ಲಿನ ಸ್ಥಳಗಳು ಅಲ್ಲಿನ ಪರಿಸರ ಅಲ್ಲಿನ ಜನರ ಸ್ವಭಾವ ಅಲ್ಲಿನ ಆಹಾರ ಪದ್ಧತಿ ಪ್ರತಿಯೊಂದರ ಬಗ್ಗೆ ಸುಂದರವಾದ ಪದಗಳಲ್ಲಿ ಪೋಣಿಸಿಕೊಟ್ಟಿದ್ದಾರೆ.ಎಲ್ಲೊ ನಾವೇ ಪ್ರವಾಸ ಹೋಗ್ತಿದೀವೇನೋ ಅಂತಾ ಖಂಡಿತ ಭಾಸವಾಗುತ್ತೆ,ಅವರು ಭೇಟಿ ಕೊಟ್ಟ ಒಂದೊಂದು ಸ್ಥಳಗಳ ವಿವರಣೆ ಓದುತ್ತಾ ಹೋದಂತೆ ಆ ಸ್ಥಳದಲ್ಲಿ ಸದ್ಯ ನಾವೇ ಇದಿವೇನೋ ಅನಿಸುವು ಹಾಗೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಪುಸ್ತಕವನ್ನು ಬರೆದಿದ್ದಾರೆ ಜಿ ಎಸ್ ಶಿವರುದ್ರಪ್ಪನವರು.

ವಿದೇಶ ಪ್ರವಾಸ ಕೈಗೊಳ್ಳುವ ಮನಸಿರುವವರು ಅಥವಾ ಮನೆಯಲ್ಲಿಂದನೇ ವಿದೇಶ ಪ್ರವಾಸ ಮಾಡಬಯಸುವವರು ಈ ಪುಸ್ತವನ್ನೋಮೆ ಓದಲೇಬೇಕು,ಪುಸ್ತಕ ಓದಿದ ಮೇಲೆ ಅನಿಸಿದ್ದು ಏನಂದ್ರೆ ಜೀವನಯಾತ್ರೆ ಮುಗಿಯುವದರ ಒಳಗಾಗಿ ಇಂಗ್ಲೇಡ ಪ್ರವಾಸವನ್ನೋಮೆ ಹೋಗಿ ಬರ್ಬೇಕು ಅಂತಾ..

ಸಾರ್ವಜನಿಕ ಗ್ರಂಥಾಲಯದಿಂದ ಈ ಪುಸ್ತಕ ಓದಲು ತಂದಿದಕ್ಕೂ ಸಾರ್ಥಕವಾಯಿತು,ಪ್ರವಾಸ ಹೋಗಿ ಬಂದಷ್ಟೇ ಖುಷಿಯಾಯ್ತು,ಹಾಗೆಯೇ ನಾನು ಈಗ ಓದಲು ತೆಗೆದುಕೊಂಡಿರುವ ಪುಸ್ತಕ ಒಂದು ಐತಿಹಾಸಿಕ ಕಾದಂಬರಿ.. ಅದರ ಬಗ್ಗೆ ಮುಂದಿನ ವಾರ ಬರೆಯುವೆ..

✍️ಹೊರನಾಡ ಕನ್ನಡಿಗ ಪ್ರಕಾಶ

ಕನ್ನಡ · ಜಿ.ಎಸ್.ಶಿವರುದ್ರಪ್ಪ · Uncategorized

‘ಕಾವ್ಯಾರ್ಥ ಚಿಂತನ’ – ಜಿ.ಎಸ್.ಶಿವರುದ್ರಪ್ಪ

ಪುಸ್ತಕ : ಕಾವ್ಯಾರ್ಥ ಚಿಂತನ
ಲೇಖಕರು : ಡಾ ಜಿ.ಎಸ್.ಶಿವರುದ್ರಪ್ಪ
ವಿಭಾಗ : ತೌಲನಿಕ ವಿಮರ್ಶೆಯ ಕೃತಿ (ತೌಲನಿಕ
ಕಾವ್ಯಮೀಮಾಂಸೆಯ ಕೆಲವು
ವಿಚಾರಗಳು)
ಪ್ರಕಾಶನ : ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು
ಬೆಲೆ : ರೂ ೧೨೫/-

ಕಾವ್ಯ ಎಂದರೇನು? ಕವಿ ಯಾರು? ಅವನಲ್ಲಿ ಇರಬೇಕಾದ ಅಂಶಗಳು ಏನು ಎಂಬುದನ್ನು ತಿಳಿಯಲು ಅಭ್ಯಸಿಸಿ ಓದಬೇಕಾದ ಕೃತಿ ಇದು.

ಸೃಜನಶೀಲ ಸಾಹಿತ್ಯ ಕೃಷಿಕಾರನಿಗೆ ಮತ್ತು ಅಂತಹ ಸೃಜನಶೀಲ ಸಾಹಿತ್ಯ ಓದುಗನಲ್ಲಿ ಮೂಡಬಹುದಾದ ಕಲ್ಪನೆ ಚಿತ್ರಣವನ್ನು ಹೇಗೆ ಕಟ್ಟಿಕೊಳ್ಳುವುದು ಎಂದು ತಿಳಿಸುವ ಪಠ್ಯ ಅದಲ್ಲದೇ ಕಾವ್ಯ ಮೀಮಾಂಸೆ ಮತ್ತು ದೃಶ್ಯಕಾವ್ಯವನ್ನು ವಿಮರ್ಶೆ ಮಾಡುವ ತೌಲನಿಕ ವಿಮರ್ಶೆ ಸಾಹಿತ್ಯದ ಅಗ್ರಗಣ್ಯ ಕೃತಿ ಇದು.

ಕೊನೆಯಲ್ಲಿ ಒಂದು ಮಾತು ‘ಪತ್ರಿಕೆಗೆ ಬರೆಯುವುದನ್ನು ಕಲಿಸುವುದು ಹೇಗೆ? ಎಂಬ ಸಂಪಾದಕರ ಗೋಳಿನ, ಮತ್ತು ಸಂಪಾದಕರು ಒಪ್ಪುವಂತೆ ಬರೆಯುವುದು ಹೇಗೆ? ಎಂಬ ಬರಹಗಾರರ ಅಳಲಿನ’ ಎರಡು ಪ್ರಶ್ನೆ ಗಳಿಗೆ ವಿನಾಯಕ ಕೋಡ್ಸಕರ ಅವರು ತಮ್ಮ ಸಂಪಾದಿತ ಕೃತಿಯಾದ “ಪತ್ರಿಕೆಗೆ ಬರೆಯೋದು ಹೇಗೆ?” ಉತ್ತರ ಕೊಟ್ಟಂತೆ,
‘ ಸಿನಿಮಾ ಕಟ್ಟುವಿಕೆಯ ಪ್ರಕ್ರಿಯೆಗಳನ್ನು’ ಜೋಗಿ ಯವರು ಅವರ ” ಕಥೆ ಚಿತ್ರಕಥೆ ಸಂಭಾಷಣೆ” ಪುಸ್ತಕದಲ್ಲಿ ತಿಳಿಸುವ ಹಾಗೆ,
ಕವಿ ಮತ್ತು ವಿಮರ್ಶಕನ ರಹಸ್ಯಗಳನ್ನು ಓದುಗನ ಮುಂದೆ ಇಟ್ಟು ಸಾಹಿತಿ ಮತ್ತು ಓದುಗನಿಗೆ ಕ್ರಿಯಾತ್ಮಕ ಅಂತರ್ ದೃಷ್ಟಿ ಹುಟ್ಟಿಸುವ ಕನ್ನಡ ಸಾಹಿತ್ಯದ ಅಮೂಲ್ಯ ಕೃತಿ. ೧೯೮೪ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಕೃತಿಯು ಇದಾಗಿದೆ.

ಧನ್ಯವಾದಗಳು.
-ಶಶಿಧರ್ ಕೃಷ್ಣ
೦೩/೦೩/೨೦೧೯

ಕನ್ನಡ · ಜಿ.ಎಸ್.ಶಿವರುದ್ರಪ್ಪ · Uncategorized

‘ಗಂಗೆಯ ಶಿಖರಗಳಲ್ಲಿ’ – ಜಿ.ಎಸ್.ಶಿವರುದ್ರಪ್ಪ

FB_IMG_1537193414857.jpg

ಈ ಪುಸ್ತಕದಲ್ಲಿ ಹಿಮಾಲಯದ ನಾಲ್ಕು ಧಾಮಗಳೆಂದು ಹೆಸರಾದ ಗಂಗೋತ್ರಿ, ಯಮುನೋತ್ರಿ, ಬದರಿ, ಕೇದಾರಗಳಿಗೆ. ಕೇವಲ ಹತ್ತು ದಿನಗಳ ಕಾಲ ಕೈಕೊಂಡ ಪ್ರವಾಸವನ್ನು, ಕುರಿತು ಒಂದು ಪುಟ್ಟ ಕಥನ ಇದು. ವಸಂತ ಪ್ರಕಾಶನದಿಂದ ಬಿಡುಗಡೆ ಆದ ಪುಸ್ತಕ. ಇದರ ಬೆಲೆ ೭೦ ರೂಪಾಯಿ.

ಶಿವಾನಂದ ರೇವಯ್ಯನವರ್