ಕನ್ನಡ · ನಾಗೇಶ್ ಕುಮಾರ್. ಸಿ.ಎಸ್ · Uncategorized

‘ಸುವರ್ಣ ಕರಾವಳಿ’ – ನಾಗೇಶ್ ಕುಮಾರ್ ಸಿ.ಎಸ್

FB_IMG_1590418291156

#ಓದಿ_ಓದಿಸಿ ( ಪುಸ್ತಕ ಪರಿಚಯ 1 2 ) (ಸುವರ್ಣ ಕರಾವಳಿ – ನಾಗೇಶ್ ಕುಮಾರ್ ಸಿ.ಎಸ್ )

ಅಂದೊಂದು ಕಾಲವಿತ್ತು…!! ಪತ್ತೆದಾರ ಪುರುಷೋತ್ತಮ, ಜಿಂಕೆಯ ಸಾಹಸಗಳು, 007, ಪತ್ತೆದಾರ ಮಧುಸೂಧನ, ಪತ್ತೆದಾರ ಅರಿಂಜಯ, ಪತ್ತೆದಾರ ಗಾಳಿರಾಯ, ಮೇಜರ್ ಹೇಮಂತ್, ಪತ್ತೇದಾರ ಜೋಡಿ ಮೃತ್ಯುಂಜಯ ಮತ್ತು ಕುಮಾರ್, ಮುಂತಾದ ಪಾತ್ರಗಳನ್ನು ಎದುರು ನೋಡುವ, ಅತ್ಯಂತ ಆಸಕ್ತಿಯಿಂದ ಓದುವ, ಕ್ಷಣಕ್ಷಣಕ್ಕೂ ಮೈ ನವಿರೇಳಿಸುವ ಘಟನೆಗಳ ಜೊತೆ ನಾವೂ ಸುಯ್ಯನೆ ಸಾಗುವ, ಅವನೇ ಅವನೇ ಅವನೇ ಕೊಲೆಗಾರ ಎಂದೋ, ಅವನೇ ದರೋಡೆಕೋರ ಎಂದೋ ಯೋಚಿಸುತ್ತಿರುವಾಗ ಘಟನೆಗಳು ಹತಾತ್ತಾಗಿ ತಿರುಗಿ ನಿಂತು ಎತ್ತೆತ್ತಲೋ ಹೋದಂತೆನಿಸಿ, ಕಥೆಯನ್ನು ಮತ್ತಷ್ಟು ಕ್ಲಿಷ್ಟಗೊಳಿಸಿ, ಓದುಗರ ಎದೆ ಬಡಿತ ಹೆಚ್ಚಿಸುವ ಕಾದಂಬರಿಗಳ ಕಾಲ. ಒಂದು ಕಾಲಘಟ್ಟದಲ್ಲಿ, ಕನ್ನಡದ ಹೆಸರಾಂತ ಮಾಸಿಕಗಳು ಒಂದಾದರೂ ಪತ್ತೇದಾರಿ ಕಥೆ, ಕಾದಂಬರಿ, ಇಲ್ಲದೇ ಮಾರುಕಟ್ಟೆಗೆ ಬರುತ್ತಿರಲಿಲ್ಲ. ಅದು ಓದುವ ಕಾಲವಾಗಿತ್ತು. ಮನುಷ್ಯ ತನ್ನ ಓದಿನ ಮೂಲಕವೇ ಘಟನೆಗಳನ್ನು ಕಲ್ಪಿಸಿಕೊಂಡು, ತಾನೂ ಆ ಕಥಾನಕದ ಭಾಗವೇ ಆಗಿಬಿಡುತ್ತಿದ್ದ.

ಆ ಕಾಲಘಟ್ಟದಲ್ಲಿ ಪ್ರಪಂಚದಲ್ಲಿ ಇರುವ ಹಲವಾರು ದೇಶಗಳ, ಹಲವಾರು ಪಟ್ಟಣಗಳ ಹೆಸರನ್ನು ಕೇಳಿದ್ದು ಈ ಕಾದಂಬರಿಗಳಿಂದಲೇ ಎಂದರೆ ತಪ್ಪಾಗಲಾರದು. ಜಿಂಕೆ ತನ್ನ ಮೊಣಕೈಗೆ ಅವನ ನೆಚ್ಚಿನ ಚಾಕುವನ್ನು ಅಂಟಿಸಿಕೊಂಡು, ಕಾಲಿನ ಸಾಕ್ಸಿನಲ್ಲಿ ರಿವಾಲ್ವರ್ ಇರಿಸಿಕೊಂಡು ಹೊರಬಿದ್ದ ಎಂದರೆ, ನಮಗಿಲ್ಲಿ ಒಂದು ಹೊಸ ನಗರದ ಹೆಸರು ಶಾಶ್ವತವಾಗಿ ಮೆದುಳಿನಲ್ಲಿ ಅಚ್ಚೊತ್ತುತ್ತಿತ್ತು. ಆತ ನೀರಿನಡಿಯಲ್ಲಿ ಎರಡು ನಿಮಿಷ ಮುಳುಗಿಕೊಂಡೇ ಈಜುತ್ತಿದ್ದ ಎಂಬುದನ್ನು ನಂಬಲು ಸಾಧ್ಯವಾಗದೆ ಇದ್ದರೂ ನಂಬಬೇಕಾಗುತ್ತಿತ್ತು. ವಿಧವಿಧದ ಹೆಸರುಗಳುಳ್ಳ ವಿಮಾನ ನಿಲ್ದಾಣಗಳ ಮೂಲಕ ಕಂಡು ಕೇಳರಿಯದ ದೇಶಗಳಿಗೆ ಸಾಗುವ ಆ ಪತ್ತೆದಾರರು ಒಂದು ಕಾಲದ ಹೀಮ್ಯಾನ್ ಗಳಾಗಿದ್ದರು. ಈಗೆಲ್ಲಿ ಹೋಯಿತು ಆ ಪತ್ತೇದಾರಿ ಕಾದಂಬರಿಗಳು ಎಂದು ಯೋಚಿಸಲೂ ಕೂಡಾ ಬಿಡುವಿಲ್ಲದ ಕಾಲಘಟ್ಟದಲ್ಲಿ ನಾವಿದ್ದೇವೆ ಅಲ್ಲವೇ?

ಇಲ್ಲ..ಸ್ವಲ್ಪ ತಾಳಿ. ವರ್ತಮಾನ ಕಾಲದಲ್ಲಿ ನಮ್ಮ ನಾಡಿನಲ್ಲಿ ಮತ್ತೆ ಅಂತಹ ಆಸಕ್ತಿಕರ ಕಥೆಗಳನ್ನು, ಕಾದಂಬರಿಗಳನ್ನು ಬರೆಯುತ್ತಿರುವ ಲೇಖಕರಾದ ಶ್ರೀ ನಾಗೇಶ್ ಕುಮಾರ್ Nagesh Kumar C S ಅವರ ಸುವರ್ಣ ಕರಾವಳಿ ಕಾದಂಬರಿಯನ್ನು ಮೊನ್ನೆ ಓದಿದೆ.

ಪತ್ತೇದಾರಿ ಕಾದಂಬರಿಯೊಂದನ್ನು ಬರೆಯಲು ಮೊದಲು ಒಂದಷ್ಟು ಹೋಂ ವರ್ಕ್ ಮಾಡಿಕೊಳ್ಳಬೇಕಾದ ಅಗತ್ಯವಿರುತ್ತದೆ. ಯಾವ ವಿಷಯದ ಬಗ್ಗೆ ಬರೆಯಬೇಕು ಎಂಬುದನ್ನು ಮೊದಲೇ ಸಿದ್ದಪಡಿಸಿ ಇಟ್ಟುಕೊಂಡಿದ್ದರೂ ಕೂಡಾ, ಅದನ್ನು ಮೊದಲೇ ಹೇಳಬೇಕಾ, ನಡುವಲ್ಲಿ ಹೇಳಬೇಕಾ ಅಥವಾ ಅಂತ್ಯದಲ್ಲಿ ಹೇಳಬೇಕಾ ಎಂಬುದನ್ನು ನಿರ್ಧರಿಸುವುದು ಸ್ವಲ್ಪ ಕಠಿಣವೇ !! ಹಿಂದಿನ ಬಹಳಷ್ಟು ಲೇಖಕರು, ಕಥೆಯ ಪ್ರಾರಂಭದಲ್ಲೇ ಪತ್ತೆದಾರನಿಗೆ ವಿಷಯ ವಿವರಿಸುವಂತೆ, ಆ ನಂತರ ಪತ್ತೇದಾರ ಆಯಾ ದೇಶಗಳಿಗೆ ಹೋಗಿ ತನ್ನ ಕಾರ್ಯ ಸಾಧಿಸಿಕೊಂಡು ಬರುವಂತೆ ಕಥೆಯನ್ನು ಹೆಣೆದಿರುತ್ತಿದ್ದರು. ಆ ಮೂಲಕ ಪತ್ತೆದಾರ ಏನು ಪತ್ತೆ ಮಾಡಬೇಕು ಎಂಬುದು ಓದುಗರಿಗೂ ಗೊತ್ತಿರುತ್ತಿತ್ತು. ಇನ್ನೂ ಕೆಲವು ಲೇಖಕರು, ಕಾದಂಬರಿ ಮುಂದುವರಿಯುತ್ತಾ ಹೋಗುತ್ತಿರುವಾಗ ನಡುವಲ್ಲಿ ಒಂದು ಕಡೆ ಓದುಗರಿಗೆ ವಿಷಯ ತಿಳಿಸಿಯೂ ಕುತೂಹಲ ಕಾಯ್ದುಕೊಂಡು ಹೋಗುವಂತೆ ಬರೆಯುತ್ತಿದ್ದರು.

ನಾಗೇಶ್ ಕುಮಾರ್ ಅವರ ‘ಸುವರ್ಣ ಕರಾವಳಿ’ ಯಲ್ಲಿ ಕೊನೆಯ ಹಂತದವರೆಗೂ ಕುತೂಹಲವನ್ನು ಕಾಯ್ದಿಟ್ಟುಕೊಂಡಿದ್ದಾರೆ. ಲೇಖಕರು ಚನ್ನೈ ನಿವಾಸಿ ಆದ ಕಾರಣವೋ ಏನೋ ಗೊತ್ತಿಲ್ಲ, ಆದರೆ ಸಮುದ್ರ, ಸಮುದ್ರ ತೀರ, ನೌಕಾಪಡೆ, ನೌಕಾನೆಲೆ, ಇಂತಹ ವಸ್ತು-ವಿವರಗಳು, ಹಂದರಗಳನ್ನು ಜಾಸ್ತಿ ಬಳಸುತ್ತಾರೆ ಎನ್ನಿಸುತ್ತಿದೆ. ಆದರೆ, ನಿಖರವಾಗಿ ವಿವರಗಳನ್ನು ಕಲೆಹಾಕಿ ಪಾತ್ರಪೋಷಣೆ ಮಾಡುವ ಮೂಲಕ ಇವರು ಪಾತ್ರಗಳನ್ನು ಓದುಗರಿಗೆ ಆಪ್ತವಾಗಿಸಬಲ್ಲರು. ಮತ್ತು ಅನಗತ್ಯವಾಗಿ ಕಥೆಯನ್ನು ಎಳೆದಾಡದೇ ಬರೆಯುವ ಕಾರಣ ಬಹಳ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ ಹಾಗೂ ಇಷ್ಟವಾಗುತ್ತದೆ. ಈ ಕಾದಂಬರಿಯಲ್ಲಿ ಪ್ರಾರಂಭದಲ್ಲಿ ಒಂದು ಘಟನೆ ಬರುತ್ತದೆ. ಅದಕ್ಕೂ ಇಡೀ ಕಥೆಗೂ ಏನು ಸಂಬಂಧ ಎಂಬುದು ನಮಗೆ ಕೊನೆಯವರೆಗೂ ತಿಳಿಯುವುದಿಲ್ಲ. ಯಾಕಾಗಿ ಲೇಖಕರು ಮೊದಲ ಘಟನೆ ಬರೆದಿದ್ದಾರೆ ಎಂದು ಓದುತ್ತಾ ಓದುತ್ತಾ ಹೋದಂತೆ ಕಥೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಕೊನೆಯಲ್ಲಿ ಸಂಪೂರ್ಣ ವಿವರಗಳು ಗೊತ್ತಾದ ನಂತರ ಒಮ್ಮೆ ಅಯ್ಯೋ, ಎಷ್ಟು ಸೊಗಸಾಗಿ ಬರೆದಿದ್ದಾರೆ ಇವರು ಎಂದು ಉದ್ಘರಿಸುವಂತೆ ಆಗುತ್ತದೆ.

ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾರೆ. ಆದರೆ ಈ ಲೇಖಕರು ನಾಗೇಶ್ ಕುಮಾರ್ ಇವರು ಹೊರನಾಡಿನಲ್ಲಿ ವೃತ್ತಿನಿರತರಾಗಿ ವಾಸವಾಗಿದ್ದೂ ಕೂಡಾ ಕನ್ನಡ ಭಾಷೆಯ ಮೇಲೆ ಅಪಾರ ಅಭಿಮಾನ ಹೊಂದಿರುವ ಬರಹಗಾರರು. ಎರಡು ವರ್ಷಗಳ ಮೊದಲೇ ಇವರ ಎರಡು ಕಾದಂಬರಿಗಳನ್ನು ಡಿಜಿಟಲ್ ರೂಪದಲ್ಲಿ ಪ್ರಕಟಿಸಿ ಮಾರಾಟ ಮಾಡುವ ಸಾಹಸ ಮಾಡಿದ್ದರು. ಆಗ ಡಿಜಿಟಲ್ ಪ್ರತಿಯನ್ನು ಇನ್ಸ್ಟಾಮೊಜಿಯೋ ದಿಂದ ಖರೀದಿ ಮಾಡಿದ್ದೆ. ಹಾಗೊಂದು ಮಾರಾಟ ಸಾಧ್ಯತೆ ಇದೆ ಎಂಬುದು ಗೊತ್ತಾಗಿದ್ದೆ ಲೇಖಕರಿಂದ. ಆ ಸಮಯದಲ್ಲಿ ಅದೊಂದು ಹೊಸ ಪ್ರಯತ್ನವೂ ಆಗಿತ್ತು. ತಮ್ಮದೇ ಬ್ಲಾಗ್ ನಲ್ಲಿ ಆಧಾರ ಸಹಿತವಾಗಿ ಬರೆಯುವ ಲೇಖಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪ್ರತಿಲಿಪಿಯಲ್ಲಿ ಸಕ್ರಿಯ ಬರಹಗಾರರಾಗಿದ್ದು ತಾಯಿ ಕನ್ನಡಾಂಬೆಯ ಸೇವೆಯನ್ನು ಸಾಧ್ಯವಾದ ರೀತಿಯಲ್ಲಿ ಮಾಡುತ್ತಿದ್ದಾರೆ.

ಹಾಗಂತ ಕೇವಲ ಪತ್ತೇದಾರಿ ಕಥೆ ಕಾದಂಬರಿಗಳನ್ನು ಮಾತ್ರ ಬರೆಯುತ್ತಾರೆ ಇವರು ಎಂದು ಭಾವಿಸುವ ಅಗತ್ಯವಿಲ್ಲ. ಇವರ ಆಸಕ್ತಿ ಬಹಳ ವೈವಿಧ್ಯಮಯ. ಪೌರಾಣಿಕ ಪ್ರಸಂಗಗಳು, ತಮಿಳು ಸಾಹಿತ್ಯ, ವೈಜ್ಞಾನಿಕ ಬರಹಗಳು, ಸಾಮಾಜಿಕ ಕಥೆ-ಕಾದಂಬರಿಗಳು, ಪ್ರವಾಸ, ಅನ್ಯಗ್ರಹ ಜೀವಿಗಳು, ಹಾರುವ ತಟ್ಟೆಗಳು, ಮುಂತಾದ ರೋಚಕ ವಿಷಯಗಳ ಬಗ್ಗೆ ಕೂಡಾ ಅಪಾರ ಅಧ್ಯಯನದೊಂದಿಗೆ, ಸರಿಯಾದ ಮಾಹಿತಿಯೊಂದಿಗೆ, ಸೂಕ್ತ ಆಧಾರಗಳನ್ನಿಟ್ಟು ಹಲವು ಲೇಖನಗಳನ್ನೂ ಇವರು ಬರೆದಿದ್ದಾರೆ. ಲೇಖಕರ ಇನ್ನೂ ಹಲವು ಬರಹಗಳನ್ನು ಉಚಿತವಾಗಿ ಓದಬಹುದು ಮತ್ತು ಪ್ರಕಟವಾದ ಕಾದಂಬರಿಗಳನ್ನು ಖರೀದಿಸಲು ಅವರನ್ನು ಸಂಪರ್ಕಿಸಿ. ಲೇಖಕರು ಇನ್ನೂ ಹೆಚ್ಚು ಸಾಹಿತ್ಯ ಸೇವೆ ಮಾಡಲಿ ಎಂದು ಆಶಿಸುತ್ತಾ, ಕರ್ನಾಟಕ ರಾಜ್ಯೋತ್ಸವದ ಈ ಶುಭದಿನ ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ.

ಚನ್ನೈ ನಂತಹ ಕನ್ನಡಿಗರು ಕಡಿಮೆ ಇರುವ ಜಾಗದಲ್ಲಿ ಇದ್ದು, ಕನ್ನಡ ಭಾಷೆಯನ್ನೂ ನೆನಪಿನಲ್ಲಿ ಇರಿಸಿಕೊಂಡು, ಭಾಷಾಸಾಹಿತ್ಯಸೇವೆ ಮಾಡುತ್ತಿರುವ ಲೇಖಕ, ನಾಗೇಶ್ ಕುಮಾರ್ ಅವರ ಈ ಕಾದಂಬರಿ “ ಸುವರ್ಣ ಕರಾವಳಿ “ ಇದು ಪುಸ್ತಕ ರೂಪದಲ್ಲಿ ಕರಾಳ ಗರ್ಭದ ಜತೆಯೆ ಎರಡನೇ ಕತೆಯಾಗಿದೆ. ಅಲ್ಲದೇ ಪ್ರತಿಲಿಪಿಯಲ್ಲಿ 10547 ಜನ ಓದುಗರನ್ನು ಪಡೆದಿದೆ. 250 ಪುಸ್ತಕ ಪ್ರತಿಗಳು ಸಪ್ನಾದಲ್ಲಿ ಮಾರಲ್ಪಟ್ಟಿವೆ.

=================================

ಈ ಕಿರು ಕಾದಂಬರಿ ಕರಾಳ ಗರ್ಭ ಪುಸ್ತಕದಲ್ಲಿ ಎರಡನೆಯದಾಗಿ ಸೇರಿಸಲ್ಪಟ್ಟು ಪ್ರಕಟವಾಗಿದೆ. ಪುಸ್ತಕವನ್ನುಸಪ್ನಾ ಪುಸ್ತಕ ಮಳಿಗೆಯಿಂದ ಖರೀದಿ ಮಾಡಬಹುದು. ಲಿಂಕ್ ನೋಡಿ.
https://www.sapnaonline.com/books/karaala-garbha-cs-nagesh-1234095289-5551234095282?position=3&searchString=

=================================
ಇದನ್ನು ಈ ಲಿಂಕಿನಲ್ಲಿ ಓದಬಹುದು.

https://kannada.pratilipi.com/story/%E0%B2%B8%E0%B3%81%E0%B2%B5%E0%B2%B0%E0%B3%8D%E0%B2%A3-%E0%B2%95%E0%B2%B0%E0%B2%BE%E0%B2%B5%E0%B2%B3%E0%B2%BF-%E0%B2%B8%E0%B2%AE%E0%B2%97%E0%B3%8D%E0%B2%B0-%E0%B2%B8%E0%B2%BE%E0%B2%B9%E0%B2%B8%E0%B2%AE%E0%B2%AF-%E0%B2%AA%E0%B2%A4%E0%B3%8D%E0%B2%A4%E0%B3%87%E0%B2%A6%E0%B2%BE%E0%B2%B0%E0%B2%BF-%E0%B2%A5%E0%B3%8D%E0%B2%B0%E0%B2%BF%E0%B2%B2%E0%B3%8D%E0%B2%B2%E0%B2%B0%E0%B3%8D-%E0%B2%95%E0%B2%BE%E0%B2%A6%E0%B2%82%E0%B2%AC%E0%B2%B0%E0%B2%BF-xAcCU9rq2yGZ

ಬುಕ್ ಬ್ರಹ್ಮದಲ್ಲಿ ಲೇಖಕರ ಬಗ್ಗೆ ಪರಿಚಯ ಪುಟ ಓದಲು ಈ ಕೊಂಡಿಯನ್ನು ಒತ್ತಿ.

https://www.bookbrahma.com/author/c-s-nagesh-kumar

ಇವತ್ತಿನ ಪತ್ತೇದಾರಿ ಸಾಹಿತ್ಯದ ಸ್ಥಿತಿಗತಿಗಳ ಕುರಿತು ನಾಗೇಶ್ ಕುಮಾರ್ ಸಿ ಎಸ್ ಅವರು ಬರೆದ ವಿಮರ್ಶಾತ್ಮಕ ಲೇಖನದ ಕೊಂಡಿ ಇಲ್ಲಿದೆ. ಇದೊಂದು ಮಹತ್ವಪೂರ್ಣ ಲೇಖನವಾಗಿದ್ದು, ಸಾಹಿತ್ಯಪ್ರೇಮಿಗಳ ಆಸಕ್ತಿ ಕೆರಳಿಸುತ್ತದೆ, ಹಿಂದಿನ-ಇಂದಿನ ಪತ್ತೇದಾರಿ ಲೇಖಕರ ಪರಿಸ್ಥಿತಿಯ ವಿಸ್ತಾರ ವಿವರ ನೀಡುತ್ತದೆ.

ನಾಪತ್ತೆಯಾದ ಕನ್ನಡ ಪತ್ತೇದಾರಿ ಸಾಹಿತ್ಯ!

=====================
ಗೌತಮಾಯನ – Gouthamaayana
01/11/2019
https://www.facebook.com/gouthamaayana/
===================

ಗುರುಪ್ರಸಾದ್ ಕಾನಲೆ

ಕನ್ನಡ · ನಾಗೇಶ್ ಕುಮಾರ್. ಸಿ.ಎಸ್ · Uncategorized

‘ಸುವರ್ಣ ಕರಾವಳಿ’ – ನಾಗೇಶ್ ಕುಮಾರ್ ಸಿ.ಎಸ್

FB_IMG_1585678957594

ಗುರುಪ್ರಸಾದ ಕಾನಲೆ

ಕನ್ನಡ · ನಾಗೇಶ್ ಕುಮಾರ್. ಸಿ.ಎಸ್ · Uncategorized

‘ಕರಾಳ ಗರ್ಭ’ – ನಾಗೇಶ್ ಕುಮಾರ್ ಸಿ ಎಸ್

FB_IMG_1563998117099.jpg

ಪುಸ್ತಕ : ಕರಾಳ ಗರ್ಭ
ಲೇಖಕರು : ನಾಗೇಶ್ ಕುಮಾರ್ ಸಿಎಸ್
ವಿಭಾಗ : ಪತ್ತೇದಾರಿ ಕಾದಂಬರಿ

ನನ್ನ ಓದಿನ ಹವ್ಯಾಸ ಶುರುವಾಗಿದ್ದು ಸಾಮಾಜಿಕ ಕಥೆ, ಕಾದಂಬರಿಗಳ ಮೂಲಕ.. ಸಣ್ಣಪುಟ್ಟ ಕಥೆಗಳನ್ನು ಇಷ್ಟಪಡುತ್ತಿದ್ದವಳಿಗೆ ಮ್ಯಾಗಝಿನ್’ಗಳಲ್ಲಿ ಬರುತ್ತಿದ್ದ ಧಾರಾವಾಹಿಗಳು ಆಕರ್ಷಿತವಾದವು.. ಮುಂದಿನ ಅಧ್ಯಾಯಕ್ಕೆ ಕಾಯೋದೆ ಮಜಾ.. ಪತ್ತೇದಾರಿ ಕಥೆಗಳಿಂದ ಸ್ವಲ್ಪ ದೂರವೇ, ಅವುಗಳು ಅತೀ ಸೀರಿಯಸ್ ಆಗಿ ಇರುವುದೋ ಎಂದು, ಕೊಲೆ ದರೋಡೆ ಇವುಗಳೇ ಜಾಸ್ತಿ ಇರಬಹುದೆಂಬ ಕಲ್ಪನೆಯೋ ಏನೋ.. ಕಾರಣಗಳೇನೇ ಇರಬಹುದು ಪತ್ತೇದಾರಿ ಓದಿದ್ದು ತೀರಾ ವಿರಳ ಅನಿಸುತ್ತೆ.. ಹಾಗಂತ ಓದಿಯೇ ಇಲ್ಲ ಅಂದೇನಿಲ್ಲ..

ನಾಗೇಶ್ ಕುಮಾರ್ ಅವರು ವೃತ್ತಿಯಿಂದ ಇಂಜಿನಿಯರಿಂಗ್ ಆಗಿದ್ದು, ಬರವಣಿಗೆ ಇವರ ಹವ್ಯಾಸ.. ಪ್ರತಿಲಿಪಿಯಲ್ಲಿ ಅವರ ಕೆಲವು ಕಂತುಗಳನ್ನು ಮಾತ್ರ ಓದೋಕೆ ಸಾಧ್ಯವಾಗಿತ್ತು, ಗೆಳತಿಯೊಬ್ಬರು ಉಡುಗೊರೆಯಾಗಿ ನೀಡಿದ ‘ಕರಾಳ ಗರ್ಭ’ ಒಂದೇ ಸಲಕ್ಕೆ ಓದಿ ಮುಗಿಸಿದೆ.. ಇದೊಂದು ಜನ್ಮ ರಹಸ್ಯ ಹುಡುಕ ಹೊರಟವಳೊಬ್ಬಳ ಕಥೆ..

ಪತ್ತೇದಾರಿ ಕಥೆಗಳು ಹಲವು ಅಂಶಗಳನ್ನಿಟ್ಟುಕೊಂಡಿರುತ್ತವೆ.. ಅಲ್ಲೂ ಹಾಸ್ಯವಿರುತ್ತೆ, ನಗುವಿರುತ್ತೆ, ತಿರುವುಗಳು, ನಕಾರಾತ್ಮಕ – ಸಕಾರಾತ್ಮಕ ಸನ್ನಿವೇಶಗಳಿರುತ್ತವೆ.. ಕಥೆ ಹೇಳಿದರೆ ಪೂರ್ತಿ ಹಿಂಡಿದ ನಿಂಬೆಹಣ್ಣಿನ ತರಹ ಸ್ವಾರಸ್ಯ ಕಳೆದುಕೊಂಡು ಓದುಗರಿಗೆ ನಿರಾಸೆ ಭಾವ ಉದ್ಭವವಾಗುತ್ತೆ.. ಇಲ್ಲಿ ನಾನು ಕಥೆ ಅಥವಾ ಕಥೆಯ ವಿಮರ್ಶೆ ಮಾಡೋಲ್ಲ, ಬೆನ್ನುಡಿಯಲ್ಲಿ ಬರೆದುದ್ದನ್ನು ಅಲ್ಪ ಸ್ವಲ್ಪ ಬರೆಯುತ್ತಾ ಇದ್ದೀನಿ..

ಜನನದ ಬಗ್ಗೆ ಕುತೂಹಲ ಇರುವುದು ಸಹಜ.. ಯಾರಿಗಿರೋಲ್ಲ ಹೇಳಿ? ಅಪ್ಪ ಅಮ್ಮನ ಹೋಲಿಕೆ ಅಥವಾ ಕುಟುಂಬ ಸದಸ್ಯರ ಹೋಲಿಕೆ ಇದ್ದರೆ ಓಕೆ, ಇಲ್ಲವೆಂದರೆ? ಅನುಮಾನ ಬಾರದೆ ಇರುವುದೇ! ಸಾಕಿದವರು ಅರ್ಧಂಬರ್ಧ ಹೇಳಿದ ಸತ್ಯದ ಮೂಲ ಹುಡುಕ ಹೊರಟ ಜನಪ್ರಿಯ ಕಿರುತೆರೆ ನಟಿ, ಅವಳಿಗಿಂತ ಅವಳು ನೇಮಕಗೊಂಡ ಪತ್ತೇದಾರಿ ವಿಜಯ್ ದೇಶಪಾಂಡೆ ಸಂಕಷ್ಟಗಳನ್ನೆದುರಿಸುತ್ತಾರೆ.. ವಿಜಯ್ ಅವರ ಹಾಸ್ಯಪ್ರಜ್ಞೆ, ಅವರಿಗೆ ಸಹಾಯ ಮಾಡುವ ಲಾಯರ್ ಲೂಸಿಯಾ, ಅವರಿಬ್ಬರ ನಡುವಣ ತಿಳಿಹಾಸ್ಯ ಸಂಭಾಷಣೆ ಇಷ್ಟವಾದವು.. ಮುಂದೇನಾಗುತ್ತೆ ನೀವೇ ಓದಿ ನೋಡಿ.. ಪುಸ್ತಕದ ಪ್ರತಿಗಾಗಿ ಇಂದೇ ಲೇಖಕರನ್ನು ಸಂಪರ್ಕಿಸಿ..

ಧನ್ಯವಾದಗಳು,
-ಸುಪ್ರೀತಾ ವೆಂಕಟ್

ಕನ್ನಡ · ನಾಗೇಶ್ ಕುಮಾರ್. ಸಿ.ಎಸ್ · Uncategorized

‘ರಕ್ತಚಂದನ’ – ನಾಗೇಶ್ ಕುಮಾರ್. ಸಿ.ಎಸ್

FB_IMG_1559235336614.jpg

ಪುಸ್ತಕ #ರಕ್ತಚಂದನ#
ಲೇಖಕರು…#ನಾಗೇಶಕುಮಾರ್_ಸಿ_ಎಸ್
ಪ್ರಕಾಶನ #ಶ್ರೀನಿವಾಸಪುಸ್ತಕಪ್ರಕಾಶನ
ಬೆಲೆ #175ರೂ…

ಕತೆಗಳನ್ನು ಕಟ್ಟುತ್ತೇವಾ, ಹುಟ್ಟಿಸುತ್ತೇವಾ ಎಂದರೆ ಎರಡೂ ಅಲ್ಲ , ಅವುಗಳನ್ನು ಬರೆಯುತ್ತೇವೆ ಎನ್ನುವುದೇ ಸೂಕ್ತ ಎನ್ನುತ್ತೇನೆ ನಾನು. ಕಾರಣ, ಕತೆಗಳು ಈಗಾಗಲೇ ಬದುಕಿನ ಗತಿಯಲ್ಲಿ ಹುದುಗಿಕೊಂಡಿರುತ್ತವೆ, ದಿನ ದಿನಾ ಘಟಿಸುತ್ತಿರುತ್ತವೆ, ಮಣ್ಣೊಳಗೆ ಬಿದ್ದ ಬೀಜದಂತೆ. ಅಂದರೆ, ಕತೆಗಳು ಬದುಕಿನಲ್ಲಿ ಇವೆ ಅಥವಾ ಬದುಕೇ ಒಂದು ಕತೆಗಳ ಭಂಡಾರ…

ಹಾಗಾದರೆ, ಇದ್ಧದ್ದನ್ನೆ ಬರೆಯುವುದಾದರೆ ಲೇಖಕ/ಕಿಯ ಪಾತ್ರ ನಗಣ್ಯವೇ ಎಂದು ಯಾರಾದರೂ ಕೇಳಿದರೆ, ಖಂಡಿತಾ ನಗಣ್ಯವಲ್ಲ, ಗಣ್ಯ ಎಂದೇ ಹೇಳುವೆ. ಕಾರಣ ಸ್ಪಷ್ಠ, ಎಷ್ಟೆಲ್ಲಾ ಕತೆಗಳು ಕಣ್ಣೆದುರೇ ಘಟಿಸಿದರೂ, ಹುದುಗಿದ್ದರೂ ಎಲ್ಲರೂ ಏಕೆ ಬರೆಯುವುದಿಲ್ಲ, ಎಂದು ಪ್ರಶ್ನಿಸಿದರೆ ಇಲ್ಲಿದೆ ಉತ್ತರ.

ಕತೆಗಾರ/ರ್ತಿ ಮಾತ್ರ ಕತೆಯ ಎಳೆಯೆಂಬ ಆ ಬೀಜವನ್ನು ಗುರುತಿಸುತ್ತಾರೆ. ಅದನ್ನು ಎದೆಯೊಳಗೆ ಹುದುಗಿಸಿಕೊಂಡು ಆರೈಕೆ ಮಾಡುತ್ತಾರೆ. ಚಿಂತನೆಯ ಪುಷ್ಠಿ ನೀಡಿ ಹದವಾದ ಹಂದರದಲ್ಲಿ ಹಬ್ಬಿಸುತ್ತಾರೆ. ಹಬ್ಬಿದ ಬಳ್ಳಿ ಕಂಡ ಓದುಗ ಸಹೃದಯರು , ” ಓ ಇದೆಷ್ಟು ಸಹಜವಾಗಿದೆ, ಹೌದಲ್ಲ, ಇಲ್ಲಿರುವುದೆಷ್ಟು ನಿಜ ” ಹೀಗೆಲ್ಲ ರಸಜ್ಞರಾಗುತ್ತಾರೆ. ಆನಂದಿಸುತ್ತಾರೆ… ಇದು ಎಲ್ಲರ ಕಣ್ಣಿಗೆ ಬಿದ್ದರೂ ಎಲ್ಲರೂ ಹೀಗೆ ಮಾಡಲಾರರಾದ್ದರಿಂದಲೇ ಸಮರ್ಥ ಕತೆಗಾರ/ರ್ತಿಯಿಲ್ಲದೆ ಕತೆಗಳು ಕಾಣಲು ಸಿಕ್ಕರೂ ಓದಲು ಸಿಗಲಾರದಲ್ಲವೇ…?

ಇಂತಹ ಒಬ್ಬ ಸಮರ್ಥ ಕತೆಗಾರ ನಮ್ಮದೇ ಗುಂಪಿನಲ್ಲಿರುವ ಲೇಖಕರು, ” ಸಿ.ಎಸ್.ನಾಗೇಶ ಕುಮಾರ್” , ಮೊನ್ನೆ ಮೊನ್ನೆಯಷ್ಟೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುರಸ್ಕೃತರಾದವರು. ಇವರ ಇತ್ತೀಚೆಗಷ್ಟೆ ಬಿಡುಗಡೆಯಾದ ಕಥಾಸಂಕಲನ ” ರಕ್ತ ಚಂದನ” . 17 ಕತೆಗಳನ್ನು ಒಳಗೊಂಡಿರುವ ಈ ಪುಸ್ತಕ ದ ಎಲ್ಲ ಕತೆಗಳೂ ವಿಭಿನ್ನವಾಗಿವೆ…

ಮೂಲತಃ ಲೇಖಕರು ಪತ್ತೇದಾರಿ ಕತೆ, ಕಾದಂಬರಿಯನ್ನು ಬರೆಯುವುದರಲ್ಲಿ ಸಿದ್ಧಹಸ್ತರು ಎನ್ನುವುದನ್ನು , ಈಗಾಗಲೇ ಇಲ್ಲಿ ಬಹಳಷ್ಟು ಮಂದಿ ಅವರ ” ಕರಾಳ ಗರ್ಭ” ” ಸುವರ್ಣ ಕರಾವಳಿ”, ” “ಮುಳುಗುವ ಕೊಳ” ಇತ್ಯಾದಿಗಳನ್ನು ಓದಿಯೇ ತಿಳಿದಿರುವಿರಿ. ಪತ್ತೇದಾರಿ ಕತೆಗಳನ್ನು ಓದದ ನಾನು ” ಸುವರ್ಣ ಕರಾವಳಿ” ಪುಸ್ತಕ ಹಿಡಿದಿದ್ದೊಂದೇ ಗೊತ್ತು, ಅದು ತಾನಾಗೇ ಬಹಳ ಕುತೂಹಲದಿಂದ ಓದಿಸಿಕೊಂಡು ಹೋಯ್ತು. ತುಂಬಾ ಇಷ್ಟವಾಯ್ತು ಕೂಡ…

ಈಗ ಈ ಪುಸ್ತಕದಲ್ಲಿ ಬಹಳಷ್ಟು ಕತೆಗಳು ಅಪರಾಧ, ಕೊಲೆ, ಕಳ್ಳತನ ಇತ್ಯಾದಿ ಪತ್ತೇದಾರಿಕೆಗೆ ಒಳಪಡುವ ಕತೆಗಳೇ ಆಗಿವೆ. ಅಂದಮಾತ್ರಕ್ಕೆ ಅದೇ ವಸ್ತು ಎಂದು ತಿಳಿಯಬೇಡಿ, ಸಾಮಾಜಿಕ, ಯುವ ಪೀಳಿಗೆಯ, ಸಂದೇಶವಿರುವ , ಸನ್ನಡತೆ ಎತ್ತಿ ತೋರುವ ಕತೆಗಳೂ ಇವೆ. ಇದಕ್ಕೆ ಉದಾ, ” ಮಾರುತಿಯ ಟ್ರೀಟ್” ಈ ಕತೆ ಚಿಕ್ಕದು, ಆದರೆ ಉದಾತ್ತ ವಸ್ತುವನ್ನು ಒಳಗೊಂಡದ್ದು. ನನಗಂತೂ ಬಹಳ ಇಷ್ಟವಾಯ್ತು.

” ಪೆದ್ದ ಗೆದ್ದ” ಎನ್ನುವ ಕತೆಯೂ ಅಪರಾಧದ ಕುರಿತಾದರೂ ಹಾಸ್ಯವನ್ನೂ ಬರೆಯಬಲ್ಲೆ ಎಂದು ತೋರಿಸಿದ್ದಾರೆ ಲೇಖಕರು. ಅಪರಾಧಕ್ಕೆ ಹಾಸ್ಯ ಮಿಳಿತವಾಗಿರುವುದು ಇಲ್ಲಿಯ ಸ್ಪೆಷಾಲಿಟಿ. ಅನಿರೀಕ್ಷಿತ ತಿರುವು, ಹಾಸ್ಯದಲ್ಲೇ ಮುಕ್ತಾಯ , ಚೆನ್ನಾಗಿದೆ. ಆದರೆ, ಕೊನೆಗೆ ನನಗನ್ನಿಸಿದ್ದು, * ಕತೆ ಸೂಪರ್, ಬೆಳೆಸಿದ್ದೂ ಸೂಪರ್ ಆದರೆ ಇವರ ಎಂದಿನ ಧಾಟಿ ಪತ್ತೇದಾರಿಕೆ, ಹಾಸ್ಯವಿಲ್ಲದೆ ಗಂಭೀರ, ನಿಗೂಢವಿದ್ದರೆ ಇನ್ನೂ ಚೆನ್ನಾಗಿತ್ತೇನೊ* ಎಂದು. ಆದರೆ, ಇದು ಕೇವಲ ನನ್ನನ್ನಿಸಿಕೆ…

” ಶಾಂತಿ ಸ್ಫೋಟ” ಕತೆ ತುಂಬಾ ಹಿಡಿಸಿತು. ಇದು ಭಯೋತ್ಪಾದಕ ವಸ್ತುವನ್ನೊಳಗೊಂಡ ಇಂದಿನ ತಲ್ಲಣಗಳ ಗಂಭೀರ ಕತೆ. ಶಾಂತಿ ಸಭೆಯನ್ನು ಪುಡಿಗೈಯ್ಯುವ ಕಿಡಿಗೇಡಿ ಕೃತ್ಯಗಳನ್ನು ತಿಳಿದ ವರದಿಗಾರ್ತಿ ಧೃತಿ, ತನ್ನ ಪತಿ ಸಿಆರ್ ಪಿ ಎಫ್ ಅಧಿಕಾರಿ ಭರತ್ ಗೆ ತಿಳಿಸಿ, ಹೇಗೆ ಈ ಕುಕೃತ್ಯವನ್ನು ಹುಡಿಗೈದರು ಎನ್ನುವ ಕುತೂಹಲ ಅಂತ್ಯ ಬೆರಗಾಗಿಸದಿರದು…

ಭಾರತೀಯ ಮೌಲ್ಯಗಳಿಗೆ ವಿದೇಶದಲ್ಲಿ ಸಿಕ್ಕ ಬೆಲೆಯನ್ನು ತಿಳಿಸುವ * ನಾವು ಹಾಡುವುದೆ ಸಂಗೀತ* , ಬೀದಿಯಲ್ಲಿ ಜ್ಞಾನೋದಯವಾಗಿ ಹೆಣ್ಣಿನ ಸಾರ್ಥಕತೆ ಎಲ್ಲಿದೆ ಎನ್ನುವುದನ್ನು ಅರ್ಥೈಸಿಕೊಂಡ * ಮಗುವೆ ತಾಯಿಯ ಹಾಡು* ನನಗಿಷ್ಟವಾಯ್ತು. ಎಲ್ಲವೂ ವಿಭಿನ್ನ ವಸ್ತುಗಳ ಕತೆ. ಎಷ್ಡು ಸಂಗತಿಗಳು, ಹೊಸ ಹೊಸ ವಿಚಾರಗಳು ಕತೆಗಳಲ್ಲಿ ಬಿಚ್ಚಿಕೊಂಡಿವೆ ಎಂದರೆ ಓದಿಯೇ ತಿಳಿಯಬೇಕು.

ನಾಗೇಶ್ ಕುಮಾರ್ ಅವರ ಈ ಕತೆಗಳ ಪಾತ್ರಗಳು ಯಾವುದೇ ಭಾವತೀವ್ರತೆಯಿಲ್ಲದೆ ಸಹಜವಾಗಿ ಬೆಳೆಯುತ್ತವೆ, ಕತೆಯನ್ನು ಬೆಳೆಸುತ್ತವೆ, ಹಾಗೆಯೇ ಅಂತ್ಯವನ್ನೂ ಕಾಣಿಸುತ್ತವೆ. ಅವರ ಬರವಣಿಗೆ ಅನೌಪಚಾರಿಕವಾಗಿ ಸಾಗುವುದು ಇನ್ನೊಂದು ವಿಶೇಷ. ಘಟನೆಗಳು ಕಣ್ಮುಂದೆ ನಡೆಯುತ್ತಿರುವಂತೆ ಚಿತ್ರಣ ಕೊಡುವ ಕಲೆ ಇವರಿಗೆ ಸಿದ್ಧಿಸಿದೆ. ಗಾಂಭೀರ್ಯದ ಜೊತೆಗೆ ಹಗುರವಾದ , ಮುಗುಳ್ನಗೆ ಹುಟ್ಟಿಸುವ ವಾಕ್ಯಗಳನ್ನೂ ಹುಟ್ಟಿಸಿ ಬಿಡುತ್ತಾರೆ. ಉದಾ, “ತೊಂದರೆಗೆ ತಾಳಿ ಕಟ್ಟಿದಂತಾಯ್ತು ”

ಗರಿ ಕಿತ್ತ ನವಿಲಿನ ರಹಸ್ಯ, ವಂಚಕಿಯ ಸಂಚು , ದುಡ್ಡಿಗಿಂತಾ ರುಚಿ ಬೇರೆಯಿಲ್ಲ, ವಜ್ರ ಬೇಟೆ, ಕೆಂಪಾದವೋ ಎಲ್ಲ , ರಕ್ತ ಚಂದನ ಈ ಎಲ್ಲ ಕತೆಗಳೂ ಬಹಳ ಉತ್ತಮ ರೀತಿಯಲ್ಲಿ ಸಾಗುವ ಕತೆಗಳು. ಸಿನಿಮಾದ ದೃಷ್ಯಗಳನ್ನು ನೋಡುತ್ತಿದ್ದೀವಾ ಎನ್ನಿಸುವಷ್ಟು ಸಣ್ಣ ಸಣ್ಣ ವಿವರಗಳನ್ನೂ ಕೊಡುತ್ತಾರೆ. ಹಾಗಾಗಿ ಕತೆಗಳು ನಿರಾಳವಾಗಿ, ಆಸಕ್ತಿಯಿಂದ ಓದಿಸಿಕೊಳ್ಳುತ್ತವೆ. ಇನ್ನೊಂದೆರಡು ಕತೆಗಳು ಬಾಕಿಯಿವೆ ಅಷ್ಟೆ.

ಅನ್ನ ಬೆಂದಿದೆಯೇ ನೋಡಲು ಇಡೀ ಪಾತ್ರೆಯ ಅಗುಳನ್ನೆಲ್ಲ ಹಿಸುಕಬೇಕಿಲ್ಲ, ಒಂದೆರಡು ಅಗುಳು ಸಾಕು. ಬಹಳಷ್ಟು ಕತೆಗಳು “ಚೆನ್ನಾಗಿವೆ ” ಎನ್ನುವ ವರ್ಗಕ್ಕೇ ಸೇರಿರುವುದರಿಂದ , ಉಳಿದ ಕತೆಗಳೂ ಹೀಗೇ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುವುದೆನ್ನುವ ಭರವಸೆ ನನ್ನದು….

ನಾಗೇಶ್ ಕುಮಾರ್ ಉತ್ತಮ ಬರಹಗಾರರು, ಶುಭವಾಗಲಿ. ಉತ್ತಮ ಪತ್ತೇದಾರಿ ಕಾದಂಬರಿಗಳು ಇವರ ಬರಹದಲ್ಲಿ ಇನ್ನಷ್ಟು ಹೊರಬರಲಿ, ಓದುಗಪ್ರೇಮಿಗಳನ್ನು ತಣಿಸಲಿ ….

ಪುಸ್ತಕದ ರೂಪ ಕೂಡ ಚೆನ್ನಾಗಿದೆ ಎನ್. ರಾಮನಾಥರ ಪ್ರಕಾಶನದಲ್ಲಿ…

-ಎಸ್.ಪಿ.ವಿಜಯಲಕ್ಷ್ಮಿ

ಕನ್ನಡ · ನಾಗೇಶ್ ಕುಮಾರ್. ಸಿ.ಎಸ್ · Uncategorized

‘ರಕ್ತಚಂದನ’ – ನಾಗೇಶ್ ಕುಮಾರ್. ಸಿ.ಎಸ್

IMG_20190530_103232

ರಕ್ತ ಚಂದನ
ಲೇಖಕರು – ನಾಗೇಶ್ ಕುಮಾರ್ ಸಿ ಎಸ್.
ಲೇಖಕರು ಶುಭಾಶಯಗಳೊಂದಿಗೆ ಈ ಪುಸ್ತಕ ಕಳಿಸಿಕೊಟ್ಟರು. ಓದಲು ಪ್ರಾರಂಭಿಸಿದೆ.ಮುಗಿಸಿದ್ದೇ ಗೊತ್ತಾಗಲಿಲ್ಲ.
ಇದೊಂದು ವೈವಿಧ್ಯಮಯ ಕಥಾ ಸಂಕಲನ ಎಂಬುದರಲ್ಲಿ ಎರಡು ಮಾತಿಲ್ಲ.ಒಂದುಕಥೆಗಿಂತ ಇನ್ನೊಂದು ಕಥೆ ತಾನು ಮೇಲು ತಾನು ಮೇಲು ಎಂದು ಸ್ಪರ್ಧೆಯಲ್ಲಿ ಭಾಗವಹಿಸಿದಂತಿದೆ.ಯಾವ ಕಥೆಯೂ ನಿಮ್ಮ ಓದನ್ನು ಅರ್ಧಕ್ಕೆ ನಿಲ್ಲಿಸುವುದಿಲ್ಲ.ತುಂಬಾ ಕುತೂಹಲಕಾರಿ ಯಾಗಿವೆ.
ಕಂಗಳು ವಂದನೆ ಹೇಳಿವೆ ಕಥೆಯಂತೂ ಹೃದಯಸ್ಪರ್ಷಿಯಾಗಿದೆ.ಶಾಂತಿಸ್ಪೋಟ ಕಥೆ ಇಂದಿನ ದಿನಗಳಲ್ಲಿ ನೆಡೆಯುತ್ತಿರುವ ವಾಸ್ತವ ಘಟನೆಯನ್ನೇ ಕಣ್ಣುಮುಂದೆ ತಂದು ನಿಲ್ಲಿಸಿದೆ.ಹೇಳುತ್ತಾಹೋದರೆ ಒಂದೊಂದು ಕಥೆಯ ಸೊಬಗೇ ಸೊಬಗು.
ಪತ್ತೇದಾರಿ ಕಾದಂಬರಿಗಳು ಓದುಗರ ಆಸಕ್ತಿಯನ್ನು ಕಳೆದುಕೊಳ್ಳುತ್ತಿರುವ ಈ ಸಂದಿಗ್ದಕಾಲಘಟ್ಟದಲ್ಲಿ ನಾಗೇಶ್ ಕುಮಾರ್ ಹೊಸ ಬೆಳಕಿನ ನಕ್ಷತ್ರ. ಓದುಗರನ್ನು ನಿಧಾನವಾಗಿ ಪುನ,: ನರಸಿಂಹಯ್ಯನವರ ಕಾಲದಲ್ಲಿ ಯುವಕರು ಹೇಗೆ ಅವರ ಪುಸ್ತಕಕ್ಕೆ ಮುಗಿಬೀಳುತ್ತಿದ್ದರೋ ಹಾಗೆ ಇವರ ಕಾದಂಬರಿಗಳಿಗೂ ಮುಗಿಬೀಳುವ ಸ್ಥಿತಿ ಗೆ ತಂದು ನಿಲ್ಲಿಸುವ ಲಕ್ಷಣ ಈ ಪುಸ್ತ ಕದಲ್ಲಿ ಕಂಡು ಬರುತ್ತಿದೆ. ಆ ಅದೃಷ್ಟ ಬರುವ ಕಾಲ ಬಹಳ ದೂರ ಇಲ್ಲ.
ಕೊಂಡು ಓದಿ.ನಿರಾಸೆ ಆಗಲಾರದು.ಆನಂದಿಸುವಿರಿ

-ಬಿ.ಆರ್.ಚಂದ್ರಶೇಖರ ಬೇದೂರು

ಕನ್ನಡ · ನಾಗೇಶ್ ಕುಮಾರ್. ಸಿ.ಎಸ್ · Uncategorized

‘ಕರಾಳ ಗರ್ಭ’ – ನಾಗೇಶ್ ಕುಮಾರ್.ಸಿ.ಎಸ್

FB_IMG_1551346258222.jpg

ಪುಸ್ತಕ……ಕರಾಳ ಗರ್ಭ
ಲೇಖಕರು…ಸಿ.ಎಸ್.ನಾಗೇಶ್ ಕುಮಾರ್
ಪ್ರಕಾಶನ….ತೇಜು ಪಬ್ಲಿಕೇಷನ್ಸ್

ಬಹಳ ಹಿಂದಿನ ವರ್ಷಗಳು, ಮಾಧ್ಯಮಿಕ ಶಾಲೆಯಲ್ಲಿ ಓದುವ ದಿನಗಳು. ಮನೆಯಲ್ಲಿ ನಮ್ಮ ತಂದೆ ಯಾವಾಗ ಓದುತ್ತಿದ್ರೋ ನನಗಂತೂ ನೋಡಿದ ನೆನಪಿಲ್ಲ. ಆದರೆ, ಎಂಥ ಪುಸ್ತಕ ಪ್ರೀತಿಯೆಂದರೆ, ಆ ಕಾಲದಲ್ಲಿ ಆಗಾಗ ಕೆಲಸದ ನಿಮಿತ್ತ ಬೆಂಗಳೂರು, ಶಿವಮೊಗ್ಗೆಗೆಲ್ಲ ಹೋದವರು ತರುತ್ತಿದ್ದ ಸಾಮಾನು ಲಿಸ್ಟಿನಲ್ಲಿ ಸದಾ ಒಂದೆರಡು ಪುಸ್ತಕ, ಕೆಲವೊಮ್ಮೆ ಹದಿನೈದಿಪ್ಪತ್ತು ಹೊಸ ಪುಸ್ತಕಗಳ ಬಂಡಲ್ ಖಾಯಂ. ಬಂದು ಇಳಿಸುತ್ತಿದ್ದ ಹಾಗೆ ಊರವರೆಲ್ಲ, ಓದಿಕೊಡ್ತೀನಿ ಅಂತ ಕೇಳದೇ ತಾವಾಗೇ ಹಂಚಿಕೊಂಡು ಹೋಗುತ್ತಿದ್ದ ದಿನಗಳು. ಎಷ್ಟೋ ವಾಪಸ್ ಬಂದರೆ , ಎಷ್ಟೋ ಬರುತ್ತಿರಲಿಲ್ಲ, ಬಂದವು ಒಂಥರಾ ದೈನ್ಯೇಸಿ ಸ್ಥಿತಿಯಲ್ಲಿರುತ್ತಿದ್ದವು. ನಮಗೋ ಪುಸ್ತಕ ಜೋಪಾನ, ಬೆಲೆ ಗೊತ್ತಿರಲಿಲ್ಲ. ಒಟ್ಟಲ್ಲಿ ನಮ್ಮನೆಯಲ್ಲೊಂದು ಲೈಬ್ರರಿಯೇ…

ಆಗ ನಮ್ಮನೆಯಲ್ಲಿದ್ದ ಹೆಚ್ಚಿನ ಪುಸ್ತಕಗಳು ಎನ್.ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳು. ಪುರುಷೋತ್ತಮನ ಸಾಹಸಗಳು, ಕಾಳರಾತ್ರಿಯ ಖದೀಮ, ಅಮಾವಾಸ್ಯೆಯ ಅತಿಥಿ ಇತ್ಯಾದಿತ್ಯಾದಿ. ನನಗೆ ಓದುವ ಚಪಲ, ಆದರೆ, ಇವೆಲ್ಲ ಬೇಡ ಎನ್ನುವ ಅಪ್ಪ. ಓದುವ ಮಕ್ಕಳಿಗೆ ಕಾದಂಬರಿ ಹುಚ್ಯಾಕೆ ಅಂತ. ಆದರೂ ಕದ್ದುಮುಚ್ಚಿ ಓದುವ ಈ ಕಾದಂಬರಿಗಳ ಥ್ರಿಲ್ ಅದ್ಯಾಕೊ ನಂತರದಲ್ಲಿ ತಂತಾನೆ ಮಾಯವಾಗಿ ಸಾಮಾಜಿಕ ಕಾದಂಬರಿಗಳ ಒಲವೇ ಹೆಚ್ಚಾಯ್ತು. ಹಾಗೆ ಹೋಗಿದ್ದು ಮತ್ತೆ ಬರಲೇ ಇಲ್ಲ, ಪತ್ತೇದಾರಿಯ ಆಸಕ್ತಿಗೆ ಮಂಗಳವೇ ಆಗ್ಹೋಯ್ತು. …

ಯಾಕೀ ಪುರಾಣವೆಂದರೆ, ಈ ಗುಂಪಿನ ಸಜ್ಜನ, ಸ್ನೇಹಪರ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮೊನ್ನೆಯಷ್ಟೆ ಪುರಸ್ಕೃತರಾದ ಸಿ.ಎಸ್.ನಾಗೇಶ್ ಕುಮಾರ್ ಅವರ ಪುಸ್ತಕಗಳ ಕುರಿತು ನೋಡುತ್ತಿದ್ದೆ, ಆದರೆ, ಪತ್ತೇದಾರಿ ಕಾದಂಬರಿಗಳಾದ್ದರಿಂದ ಮನಸ್ಸು ಮಾಡಿರಲಿಲ್ಲ. ಕ್ರಮೇಣ, ಸ್ನೇಹಿತರ ಒಂದಾದರೂ ಪುಸ್ತಕ ಓದಬೇಕೆನ್ನಿಸಿ ” ಕರಾಳ ಗರ್ಭ” ಕೊಂಡುತಂದೆ.
ಇದರಲ್ಲಿನ ” ಸುವರ್ಣ ಕರಾವಳಿ ” ಕತೆ ನಿನ್ನೆಯಷ್ಟೆ ಮುಗಿಸಿದೆ. ನಿಜಕ್ಕೂ ಬಹಳ ಇಷ್ಟವಾಯ್ತು ಕಾದಂಬರಿ. ಅವರ ಬರೆಯುವ ನಿರಾಳ ಶೈಲಿ ಬಹಳವೇ ಹಿಡಿಸಿತು.

ಆಫ್ರಿಕಾದ ಅಕ್ರಮ ಚಿನ್ನ ಸಾಗಾಣಿಕೆ, ಇಲ್ಲಿಯ ದುರಾಸೆಯ ಮಾಫಿಯಾ ಗ್ಯಾಂಗಿನ ಜಾಲದ ನಡುವೆ ಅಡಗಿಕೊಂಡ ಅಪಾರ ಚಿನ್ನ, ಅದನ್ನು ಕೈಗೂಡಿಸಿಕೊಳ್ಳುವ ಅವರ ಯತ್ನಗಳು ಒಂದೆಡೆಯಾದರೆ, ಈ ಸುಳಿವು ಹೇಗೋ ಸಣ್ಣ ತೂತಿನಲ್ಲಿ ಸೋರಿಹೋಗಿ ಸರ್ಕಾರದ ಗಮನಕ್ಕೆ ಬಂದಿದೆ. ಈ ಅಕ್ರಮವನ್ನು ಮಟ್ಟು ಹಾಕಲೇಬೇಕಾದ್ದು ಅದರ ಅನಿವಾರ್ಯತೆ, ಇದಕ್ಕೆ ನೇವಿಯ ಸಹಾಯವೂ ಅತ್ಯಗತ್ಯ. ಇದಕ್ಕೆ ತಯ್ಯಾರಾಗಿ ಬಂದ ಸಬ್‍ಮೆರೀನ್ ನೌಕಾತಜ್ಞ ಸಾತ್ವಿಕ್‍ಗೆ ದೇಶದ ಕಾಳಜಿಯ ಜೊತೆಗೆ ವೈಯ್ಯಕ್ತಿಕ ಕಾರಣವೂ ತಳುಕು ಹಾಕಿಕೊಂಡಿದ್ದು ಕತೆಯ ಗಟ್ಟಿತನಕ್ಕೊಂದು ಭಾವನಾತ್ಮಕ ನೆಲೆಯನ್ನೂ ಒದಗಿಸಿತು. ಕಡೆಯಲ್ಲಿ ಸೋಲು ಯಾರದ್ದು, ಗೆಲುವು ಯಾರಿಗೆ ಎಂದು ನಾವು ಒಂದು ಸಿದ್ಧ ನೆಲೆಯಲ್ಲಿ ಊಹಿಸುತ್ತೇವಾದರೂ , ಹಾಗಾಗದಿರುವ ಸಾಧ್ಯತೆಯನ್ನೂ ಅಲ್ಲಗೆಳೆವಂತಿಲ್ಲ. ಕತೆಯನ್ನು ಕತೆಗಾರ ಮಾತ್ರ ತನ್ನಿಷ್ಟದ ಅಂತ್ಯಕ್ಕೆ ಮುಟ್ಟಿಸುವ ತವಕದಲ್ಲಿರುತ್ತಾನೆ, ಕಾರಣ ಅದು ಅವನು ಹುಟ್ಟಿಸಿದ ಕೂಸು. ಇರಲಿ , ಆದಿಯ ಪರಿಚಯ ಇಲ್ಲಾದರೂ ಮಧ್ಯ, ಅಂತ್ಯಗಳನ್ನು ಓದಿದರೇ ಸ್ವಾರಸ್ಯ…

ಪುಸ್ತಕ ಹಿಡಿದಮೇಲೆ ಮುಗಿಸದಿರಲು ಸಾಧ್ಯವಿಲ್ಲ, ಹಾಗೆ ಒಳಗೊಳ್ಳಿಸುತ್ತದೆ ಬರೆದ ಶೈಲಿ. ಒಂದೊಂದು ಪುಟವೂ ಆಸಕ್ತಿಯಿಂದ ಓದಿಸಿಕೊಳ್ಳುತ್ತದೆ. ನನಗಂತೂ ಒಂದು ಥ್ರಿಲ್ಲಿಂಗ್ ಸಿನಿಮಾ ನೋಡುತ್ತಿದ್ದೀನಾ ಎನ್ನಿಸುವಂತೆ ಮನದಕಣ್ಣಲ್ಲಿ ದೃಷ್ಯಗಳಾಗಿ ಕುಣಿದವು. ಜಲಬಿಂದು ಎನ್ನುವ ಸಬ್‍ಮೆರೀನ್ ಸಾವಿರಾರು ಅಡಿ ಸಮುದ್ರದಾಳಕ್ಕೆ ಇಳಿದಾಗ ಮೈ ಜುಂ ಎಂದಿತು, ಕಾರಣ, ಆಸ್ಟ್ರೇಲಿಯಾದಲ್ಲಿ ಹೋಗಿದ್ದ ಮಿನಿ ಸಬ್ಮೆರೀನ್ ಯಾನ, ಕ್ರೂಸ್ ನಲ್ಲಿ ಎಂಟು ದಿನಗಳು ಸಮುದ್ರಯಾನ, ರಾತ್ರಿ ಮಲಗಿದಾಗ ಅದರ ಏರಿಳಿತ ತರುತ್ತಿದ್ದ ಭಯ, ಕಗ್ಗತ್ತಲ ಕಪ್ಪುನೀರು …..ಇವೆಲ್ಲ ಅನುಭವದ ಕಾರಣ, ಇಲ್ಲಿನ ಕತೆ ಓದುತ್ತ ನಡೆದಂತೇ ಅನ್ನಿಸಿಕೆಯಾಗುತ್ತಿತ್ತು. ಸಾತ್ವಿಕ್, ಹಮೀದ್, ಸುಮನಾ ಪಾತ್ರಗಳು, ವಿರೋಧಗಳ ತಂತ್ರಗಳು, ಎಲ್ಲಕ್ಕಿಂತ ಸಮುದ್ರದ ಒಡಲಿನೊಳಗೆ ಕತೆ , ವಿವರಗಳು ಬಹಳವೇ ಹಿಡಿಸಿತು…ಇಷ್ಟಪಟ್ಟು ಓದಿಸಿಕೊಳ್ಳುವ ಕಾದಂಬರಿ…

ಅದರಲ್ಲೆ ಇರುವ ಇನ್ನೊಂದು ಕತೆ ಓದಬೇಕು. ಲೇಖಕರು ವಿಶ್ವಾಸವಿಟ್ಟು ಕಳಿಸಿದ “ನಾಳೆಯನ್ನು ಗೆದ್ದವನು” ಪುಸ್ತಕವನ್ನೂ ಓದಬೇಕು. ನಾಗೇಶ್ ಕುಮಾರ್ ಸರ್, ನಿಮ್ಮ ಬರವಣಿಗೆಗೆ 👌🙏 …
ಕಡಿಮೆ ಸಮಯದಲ್ಲಿ ಜನಕ್ಕೆ ತಲುಪಿದ್ದೀರಿ. ಇನ್ನೂ ತಲುಪುವ ಕೃತಿಗಳು ನಿಮ್ಮಿಂದ ಬರಲಿ. ಶುಭಹಾರೈಕೆಗಳು…😊

-ಎಸ್.ಪಿ.ವಿಜಯಲಕ್ಷ್ಮಿ

ಕನ್ನಡ · ನಾಗೇಶ್ ಕುಮಾರ್. ಸಿ.ಎಸ್

‘ನಾಳೆಯನ್ನು ಗೆದ್ದವನು’ – ನಾಗೇಶ್ ಕುಮಾರ್. ಸಿ.ಎಸ್

FB_IMG_1549386561850.jpg

ಕಾದಂಬರಿ : ನಾಳೆಯನ್ನು ಗೆದ್ದವನು
(ವೈಜ್ಞಾನಿಕ ಥ್ರಿಲ್ಲರ್)
ಲೇಖಕರು : ಸಿ. ಎಸ್. ನಾಗೇಶ್ ಕುಮಾರ್
ಪ್ರಕಾಶಕರು : ನ್ಯೂ ವೇವ್ ಬುಕ್ಸ್
ಬೆಲೆ : 90/-

ನಾನೊಬ್ಬ ಪುಸ್ತಕ ಪ್ರೇಮಿ ಬಳಗದ ಅಡ್ಮಿನ್ ಗಳಲ್ಲಿ ಒಬ್ಬರಾದ ಸಿ.ಎಸ್.ನಾಗೇಶ್ ಕುಮಾರ್ ಸರ್ ಅವರ ಕಾದಂಬರಿಯಿದು… ಅವರ ಪುಸ್ತಕವನ್ನು ತಂದು ತುಂಬಾ ದಿನಗಳಾಗಿದ್ದರೂ ಓದದೇ ನಿಧಾನಿಸಿದ್ದಕ್ಕೆ ಈಗ ಬೇಸರಿಸುತ್ತಿರುವೆ ಕಾರಣ ತುಂಬಾ ಸೊಗಸಾಗಿ, ಸರಳ ಭಾಷೆಯಲ್ಲಿ ಇರುವ ಇವರ ಕಾದಂಬರಿಯನ್ನು ಓದದೇ ತಡ ಮಾಡಿದೆನ್ನಲ್ಲಾ… ಎಂದು… ಅತ್ಯದ್ಭುತವಾಗಿ ಬರೆದಿದ್ದಾರೆ….
ರೋಚಕತೆ ಮತ್ತು ಥ್ರಿಲ್ಲಿಂಗ್ ಒಳಗೊಂಡ ಕಾದಂಬರಿಗಳೆರಡೂ ಸರಾಗವಾಗಿ ಓದಿಸಿ ಕೊಂಡವು… ಪತ್ತೇದಾರಿ ಕಾದಂಬರಿಯನ್ನು ಓದುವಾಗಲೇ, ಓದುಗರಿಗೆ ಕೌತುಕವನ್ನು ಕಾಯ್ದಿರಿಸುತ್ತದೆ… ಅಂತೆಯೇ ಮುಳುಗುವ ಕೊಳದ ಕಾದಂಬರಿಯೂ ಅತ್ಯಾಕರ್ಷವಾಗಿ ಓದಿಸಿ ಕೊಳ್ಳುವುದು… ಒಮ್ಮೆ ಓದಲು ಶುರು ಮಾಡಿದರೇ ಮುಗಿಸುವವರೆಗೂ ತೃಪ್ತಿಯಿಲ್ಲ…. ಪತ್ತೇದಾರಿ ಕಾದಂಬರಿಗಳನ್ನು ಬಹುತೇಕವಾಗಿ ಓದುವುದರಿಂದಲೋ ಏನೋ… ಕಾದಂಬರಿ ಅಂತ್ಯ ಇದೆ ಇರಬಹುದೆಂದು ಮನಸ್ಸಿಗೆ ತೋಚಲು ಆರಂಭಿಸಿ ಬಿಟ್ಟಿತ್ತು… ಆದರೂ ಎಲ್ಲಾ ಸಮಯವೂ ನಾವಂದು ಕೊಂಡಂತೆಯೇ ಇರಬೇಕೆಂದಿಲ್ಲವಲ್ಲ… ಹಾಗಾಗಿಯೇ ಕಾದಂಬರಿಯನ್ನು ಓದಿ ಮುಗಿಸುವವರೆಗೂ, ರಹಸ್ಯ ಬಯಲಾಗುವವರೆಗೂ ಕಾತುರದಿಂದಲೇ ಇತ್ತು…
ಮುಳುಗುವ ಕೊಳ… ಹೆಸರಾಂತ ಇನ್ಷೂರೆನ್ಸ್ ಕಂಪೆನಿಯಲ್ಲಿ, 5 ಕೋಟಿಗೆ ಜೀವ ವಿಮೆ ಪಡೆದ ಪ್ರಖ್ಯಾತ ನಟಿಯು ಈಜು ಕೊಳದಲ್ಲಿ ಬಿದ್ದು ಮುಳುಗಿ ಸಾವನ್ನಪ್ಪಿದ್ದಳು… 5 ಕೋಟಿಯ ಮೊತ್ತವನ್ನು ತನ್ನ ಕಂಪೆನಿಯೂ ತೆತ್ತಬೇಕಲ್ಲ.. ಎಂಬ ಕಾರಣದಿಂದ ಕಂಪೆನಿ ಪತ್ತೇದಾರನ ಬಳಿ ಹೇಳಿ, ಈ ಸಾವು ಸಹಜವೋ ಅಥವಾ ಕೊಲೆಯೋ… ಎಂದು ಪತ್ತೆ ಹಚ್ಚಲು ಹೇಳುತ್ತಾರೆ ಮ್ಯಾನೇಜರ್…. ಆ ಕೊಲೆಯ ಸುತ್ತಣ ರಹಸ್ಯವನ್ನು ಭೇದಿಸುವುದೇ ಕಥೆಯ ಸಾರಾಂಶ… ಒಮ್ಮೆ ಕಾದಂಬರಿಯನ್ನು ಕೈಯಲ್ಲಿಡಿದರೇ, ಪೂರ್ತಿ ಓದಿ ಮುಗಿಸುವ ತವಕ ಶುರುವಾಗುವುದರಲ್ಲಿ ಸಂಶಯವಿಲ್ಲ…

ನಾಳೆಯನ್ನು ಗೆದ್ದವನು… ಈ ಪುಸ್ತಕದ ಮತ್ತೊಂದು ಕಾದಂಬರಿ… ವೈಜ್ಞಾನಿಕ ಜಗತ್ತಿನ ವಿಸ್ಮಯದ ಭಾಗಗಳನ್ನು ರಸವತ್ತಾಗಿ ಸೃಷ್ಟಿಸಿಕೊಂಡು ಬರೆದಿದ್ದಾರೆ…. ಎರಡನೇ ಕಾದಂಬರಿಯ ಬಗ್ಗೆ ಹೇಳಲು ಮಾತುಗಳೇ ಇಲ್ಲ…. ಒಟ್ಟಾರೆ ನಾಳೆಯನ್ನು ಗೆದ್ದವನು.. ಓದುಗನ ಮನವನ್ನು ಗೆಲ್ಲುವನು…..

ಧನ್ಯವಾದಗಳು
-ದೇವಿ ಶ್ರೀ ಪ್ರಸಾದ್

ಕನ್ನಡ · ನಾಗೇಶ್ ಕುಮಾರ್. ಸಿ.ಎಸ್ · Uncategorized

‘ಮುಳುಗುವ ಕೊಳ’ – ನಾಗೇಶ್ ಕುಮಾರ್. ಸಿ ಎಸ್

FB_IMG_1536228299844.jpg

“ಮುಳುಗುವ ಕೊಳ”

*ಅದಲು ಬದಲು ಕಂಚಿ ಕದಲು*

ನಾಗೇಶ್ ಕುಮಾರ್ ಸಿ. ಎಸ್ ಅವರ ಅತ್ಯುತ್ತಮವಾದ ಒಂದು ಪತ್ತೇದಾರಿ ಕಾದಂಬರಿ “ಮುಳುಗುವ ಕೊಳ” ನಮ್ಮ ಮನಸ್ಸು, ಬುದ್ದಿ ಎಲ್ಲವನ್ನೂ ತನ್ನ ಹಿಡಿತದಲ್ಲಿ ಇಟ್ಟುಕೊಂಡು ಕೊಲೆಗಾರ ಸಿಗುವವರೆಗೂ ಪುಸ್ತಕದಿಂದ ಬಿಡುಗಡೆಗೊಳಿಸುವುದಿಲ್ಲ. ತೂಕಡಿಸುತ್ತಿದ್ದವರಿಗೆ ಈ ಪುಸ್ತಕ ಕೊಟ್ಟರೆ ಅವರ ನಿದ್ದೆಯೇ ಹಾರಿ ಹೋಗುತ್ತದೆ‌. ಲೇಖಕರು ಅಷ್ಟು ರೋಚಕವಾಗಿ ಬರೆದಿದ್ದಾರೆ.

ಅಂಚಿ-ಕಂಚಿ ಎನ್ನುವ ಇಬ್ಬರು ಅವಳಿ ಹೆಣ್ಣುಮಕ್ಕಳಲ್ಲಿ ಒಬ್ಬಳು ಮತ್ತೊಬ್ಬಳ ಹೆಸರಿನಲ್ಲಿ ಬರೋಬ್ಬರಿ ಐದು ಕೋಟಿ ಇನ್ಶೂರೆನ್ಸ್ ಮಾಡಿಸಿ ಸತ್ತು ಹೋಗುತ್ತಾಳೆ. ಅದು ಆತ್ಮಹತ್ಯೆಯೋ ಅಥವಾ ಕೊಲೆಯೋ ಅಂತ ಕಂಡು ಹಿಡಿಯುವುದೇ ರಹಸ್ಯ. ಮೇಲ್ನೋಟಕ್ಕೆ ಇದು ಐದು ಕೋಟಿಯ ಇನ್ಶೂರೆನ್ಸಿಗಾಗಿ ನಡೆದ ಕೊಲೆ ಅಂತ ನಾವೆಲ್ಲರೂ ಭಾವಿಸುತ್ತೇವೆ. ಆದರೆ ರಹಸ್ಯ ಬೇರೆಯೇ ಇದೆ.

ಮೊದಲಿನಿಂದಲೂ ಸಿಐಡಿ, ಅದಾಲತ್ ಮುಂತಾದ ಕ್ರೈಮ್ ಸಂಬಂಧಿತ ಧಾರಾವಾಹಿ ನೋಡುತ್ತಿದ್ದ ನನಗೆ ಮೊದಲಿಗೇ ರಹಸ್ಯ ಏನಿರಬಹುದು ಅಂತ ಸುಳಿವು ಸಿಕ್ಕಿತ್ತು. ಆದರೆ ಆ ಸುಳಿವನ್ನು ಲೇಖಕರು ಹೇಗೆ ಬೇಧಿಸುತ್ತಾರೆ ಎಂಬ ಕುತೂಹಲವನ್ನು ಈ ಬರಿಯು ಕೊನೆಯವರೆಗೂ ಉಳಿಸಿಕೊಂಡಿತು.

ಪತ್ತೇದಾರಿ ಕಥೆ ಬರೆಯುವ ಕುತೂಹಲ ಇದ್ದವರಿಗೆ ಈ ಕೃತಿ ಒಳ್ಳೆಯ ಮಾರ್ಗದರ್ಶಿ. ಅಂತ್ಯವನ್ನು ಮೊದಲೇ ಊಹಿಸಿ, ಅದಕ್ಕೆ ತಕ್ಕಂತೆ ಹಿಂದಿನಿಂದ ಕಥೆ ಹೆಣೆದುಕೊಂಡು ಬರುವುದು ಒಂದು ಕಲೆ. ಅದು ಎಲ್ಲರಿಗೂ ಸಿದ್ಧಿಸುವುದಿಲ್ಲ. ಆದರೆ ಲೇಖಕರು ಅತ್ಯಮೋಘವಾಗಿ ಕಥೆ ಹೆಣೆದಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದರೆ ಕಥೆ ಕಟ್ಟುವ ಕಲೆಯನ್ನು ನಾವೂ ಸಹ ಕಲಿಯಬಹುದಾಗಿದೆ.

ಕಡೆಯದಾಗಿ ಒಂದು ಮಾತ್ರ ಹೇಳಬಲ್ಲೆ.. ಒಮ್ಮೆ ಹಿಡಿದರೆ ನಿಮ್ಮ ಕೈ ಕೆಳಗಿಡದಂತೆ ಮಾಡುವ ಶಕ್ತಿ ಈ ಪುಸ್ತಕಕ್ಕೆ ಇದೆ. ಪತ್ತೇದಾರಿ ಬಹಳ ವಿರಳವಾಗಿರುವ ಈ ಕಾಲದಲ್ಲಿ ಇದು ಬಹಳ‌ ಒಳ್ಳೆಯ ಕಾದಂಬರಿ.

******

-ಕೆ.ಎ.ಸೌಮ್ಯ
ಮೈಸೂರು