ಕನ್ನಡ · ಜಿ.ಎಸ್.ಶಿವರುದ್ರಪ್ಪ · Uncategorized

‘ಕಾವ್ಯಾರ್ಥ ಚಿಂತನ’ – ಜಿ.ಎಸ್.ಶಿವರುದ್ರಪ್ಪ

ಪುಸ್ತಕ : ಕಾವ್ಯಾರ್ಥ ಚಿಂತನ
ಲೇಖಕರು : ಡಾ ಜಿ.ಎಸ್.ಶಿವರುದ್ರಪ್ಪ
ವಿಭಾಗ : ತೌಲನಿಕ ವಿಮರ್ಶೆಯ ಕೃತಿ (ತೌಲನಿಕ
ಕಾವ್ಯಮೀಮಾಂಸೆಯ ಕೆಲವು
ವಿಚಾರಗಳು)
ಪ್ರಕಾಶನ : ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು
ಬೆಲೆ : ರೂ ೧೨೫/-

ಕಾವ್ಯ ಎಂದರೇನು? ಕವಿ ಯಾರು? ಅವನಲ್ಲಿ ಇರಬೇಕಾದ ಅಂಶಗಳು ಏನು ಎಂಬುದನ್ನು ತಿಳಿಯಲು ಅಭ್ಯಸಿಸಿ ಓದಬೇಕಾದ ಕೃತಿ ಇದು.

ಸೃಜನಶೀಲ ಸಾಹಿತ್ಯ ಕೃಷಿಕಾರನಿಗೆ ಮತ್ತು ಅಂತಹ ಸೃಜನಶೀಲ ಸಾಹಿತ್ಯ ಓದುಗನಲ್ಲಿ ಮೂಡಬಹುದಾದ ಕಲ್ಪನೆ ಚಿತ್ರಣವನ್ನು ಹೇಗೆ ಕಟ್ಟಿಕೊಳ್ಳುವುದು ಎಂದು ತಿಳಿಸುವ ಪಠ್ಯ ಅದಲ್ಲದೇ ಕಾವ್ಯ ಮೀಮಾಂಸೆ ಮತ್ತು ದೃಶ್ಯಕಾವ್ಯವನ್ನು ವಿಮರ್ಶೆ ಮಾಡುವ ತೌಲನಿಕ ವಿಮರ್ಶೆ ಸಾಹಿತ್ಯದ ಅಗ್ರಗಣ್ಯ ಕೃತಿ ಇದು.

ಕೊನೆಯಲ್ಲಿ ಒಂದು ಮಾತು ‘ಪತ್ರಿಕೆಗೆ ಬರೆಯುವುದನ್ನು ಕಲಿಸುವುದು ಹೇಗೆ? ಎಂಬ ಸಂಪಾದಕರ ಗೋಳಿನ, ಮತ್ತು ಸಂಪಾದಕರು ಒಪ್ಪುವಂತೆ ಬರೆಯುವುದು ಹೇಗೆ? ಎಂಬ ಬರಹಗಾರರ ಅಳಲಿನ’ ಎರಡು ಪ್ರಶ್ನೆ ಗಳಿಗೆ ವಿನಾಯಕ ಕೋಡ್ಸಕರ ಅವರು ತಮ್ಮ ಸಂಪಾದಿತ ಕೃತಿಯಾದ “ಪತ್ರಿಕೆಗೆ ಬರೆಯೋದು ಹೇಗೆ?” ಉತ್ತರ ಕೊಟ್ಟಂತೆ,
‘ ಸಿನಿಮಾ ಕಟ್ಟುವಿಕೆಯ ಪ್ರಕ್ರಿಯೆಗಳನ್ನು’ ಜೋಗಿ ಯವರು ಅವರ ” ಕಥೆ ಚಿತ್ರಕಥೆ ಸಂಭಾಷಣೆ” ಪುಸ್ತಕದಲ್ಲಿ ತಿಳಿಸುವ ಹಾಗೆ,
ಕವಿ ಮತ್ತು ವಿಮರ್ಶಕನ ರಹಸ್ಯಗಳನ್ನು ಓದುಗನ ಮುಂದೆ ಇಟ್ಟು ಸಾಹಿತಿ ಮತ್ತು ಓದುಗನಿಗೆ ಕ್ರಿಯಾತ್ಮಕ ಅಂತರ್ ದೃಷ್ಟಿ ಹುಟ್ಟಿಸುವ ಕನ್ನಡ ಸಾಹಿತ್ಯದ ಅಮೂಲ್ಯ ಕೃತಿ. ೧೯೮೪ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಕೃತಿಯು ಇದಾಗಿದೆ.

ಧನ್ಯವಾದಗಳು.
-ಶಶಿಧರ್ ಕೃಷ್ಣ
೦೩/೦೩/೨೦೧೯