ಕನ್ನಡ · ನಾಗೇಶ್ ಕುಮಾರ್. ಸಿ.ಎಸ್

‘ನಾಳೆಯನ್ನು ಗೆದ್ದವನು’ – ನಾಗೇಶ್ ಕುಮಾರ್. ಸಿ.ಎಸ್

FB_IMG_1549386561850.jpg

ಕಾದಂಬರಿ : ನಾಳೆಯನ್ನು ಗೆದ್ದವನು
(ವೈಜ್ಞಾನಿಕ ಥ್ರಿಲ್ಲರ್)
ಲೇಖಕರು : ಸಿ. ಎಸ್. ನಾಗೇಶ್ ಕುಮಾರ್
ಪ್ರಕಾಶಕರು : ನ್ಯೂ ವೇವ್ ಬುಕ್ಸ್
ಬೆಲೆ : 90/-

ನಾನೊಬ್ಬ ಪುಸ್ತಕ ಪ್ರೇಮಿ ಬಳಗದ ಅಡ್ಮಿನ್ ಗಳಲ್ಲಿ ಒಬ್ಬರಾದ ಸಿ.ಎಸ್.ನಾಗೇಶ್ ಕುಮಾರ್ ಸರ್ ಅವರ ಕಾದಂಬರಿಯಿದು… ಅವರ ಪುಸ್ತಕವನ್ನು ತಂದು ತುಂಬಾ ದಿನಗಳಾಗಿದ್ದರೂ ಓದದೇ ನಿಧಾನಿಸಿದ್ದಕ್ಕೆ ಈಗ ಬೇಸರಿಸುತ್ತಿರುವೆ ಕಾರಣ ತುಂಬಾ ಸೊಗಸಾಗಿ, ಸರಳ ಭಾಷೆಯಲ್ಲಿ ಇರುವ ಇವರ ಕಾದಂಬರಿಯನ್ನು ಓದದೇ ತಡ ಮಾಡಿದೆನ್ನಲ್ಲಾ… ಎಂದು… ಅತ್ಯದ್ಭುತವಾಗಿ ಬರೆದಿದ್ದಾರೆ….
ರೋಚಕತೆ ಮತ್ತು ಥ್ರಿಲ್ಲಿಂಗ್ ಒಳಗೊಂಡ ಕಾದಂಬರಿಗಳೆರಡೂ ಸರಾಗವಾಗಿ ಓದಿಸಿ ಕೊಂಡವು… ಪತ್ತೇದಾರಿ ಕಾದಂಬರಿಯನ್ನು ಓದುವಾಗಲೇ, ಓದುಗರಿಗೆ ಕೌತುಕವನ್ನು ಕಾಯ್ದಿರಿಸುತ್ತದೆ… ಅಂತೆಯೇ ಮುಳುಗುವ ಕೊಳದ ಕಾದಂಬರಿಯೂ ಅತ್ಯಾಕರ್ಷವಾಗಿ ಓದಿಸಿ ಕೊಳ್ಳುವುದು… ಒಮ್ಮೆ ಓದಲು ಶುರು ಮಾಡಿದರೇ ಮುಗಿಸುವವರೆಗೂ ತೃಪ್ತಿಯಿಲ್ಲ…. ಪತ್ತೇದಾರಿ ಕಾದಂಬರಿಗಳನ್ನು ಬಹುತೇಕವಾಗಿ ಓದುವುದರಿಂದಲೋ ಏನೋ… ಕಾದಂಬರಿ ಅಂತ್ಯ ಇದೆ ಇರಬಹುದೆಂದು ಮನಸ್ಸಿಗೆ ತೋಚಲು ಆರಂಭಿಸಿ ಬಿಟ್ಟಿತ್ತು… ಆದರೂ ಎಲ್ಲಾ ಸಮಯವೂ ನಾವಂದು ಕೊಂಡಂತೆಯೇ ಇರಬೇಕೆಂದಿಲ್ಲವಲ್ಲ… ಹಾಗಾಗಿಯೇ ಕಾದಂಬರಿಯನ್ನು ಓದಿ ಮುಗಿಸುವವರೆಗೂ, ರಹಸ್ಯ ಬಯಲಾಗುವವರೆಗೂ ಕಾತುರದಿಂದಲೇ ಇತ್ತು…
ಮುಳುಗುವ ಕೊಳ… ಹೆಸರಾಂತ ಇನ್ಷೂರೆನ್ಸ್ ಕಂಪೆನಿಯಲ್ಲಿ, 5 ಕೋಟಿಗೆ ಜೀವ ವಿಮೆ ಪಡೆದ ಪ್ರಖ್ಯಾತ ನಟಿಯು ಈಜು ಕೊಳದಲ್ಲಿ ಬಿದ್ದು ಮುಳುಗಿ ಸಾವನ್ನಪ್ಪಿದ್ದಳು… 5 ಕೋಟಿಯ ಮೊತ್ತವನ್ನು ತನ್ನ ಕಂಪೆನಿಯೂ ತೆತ್ತಬೇಕಲ್ಲ.. ಎಂಬ ಕಾರಣದಿಂದ ಕಂಪೆನಿ ಪತ್ತೇದಾರನ ಬಳಿ ಹೇಳಿ, ಈ ಸಾವು ಸಹಜವೋ ಅಥವಾ ಕೊಲೆಯೋ… ಎಂದು ಪತ್ತೆ ಹಚ್ಚಲು ಹೇಳುತ್ತಾರೆ ಮ್ಯಾನೇಜರ್…. ಆ ಕೊಲೆಯ ಸುತ್ತಣ ರಹಸ್ಯವನ್ನು ಭೇದಿಸುವುದೇ ಕಥೆಯ ಸಾರಾಂಶ… ಒಮ್ಮೆ ಕಾದಂಬರಿಯನ್ನು ಕೈಯಲ್ಲಿಡಿದರೇ, ಪೂರ್ತಿ ಓದಿ ಮುಗಿಸುವ ತವಕ ಶುರುವಾಗುವುದರಲ್ಲಿ ಸಂಶಯವಿಲ್ಲ…

ನಾಳೆಯನ್ನು ಗೆದ್ದವನು… ಈ ಪುಸ್ತಕದ ಮತ್ತೊಂದು ಕಾದಂಬರಿ… ವೈಜ್ಞಾನಿಕ ಜಗತ್ತಿನ ವಿಸ್ಮಯದ ಭಾಗಗಳನ್ನು ರಸವತ್ತಾಗಿ ಸೃಷ್ಟಿಸಿಕೊಂಡು ಬರೆದಿದ್ದಾರೆ…. ಎರಡನೇ ಕಾದಂಬರಿಯ ಬಗ್ಗೆ ಹೇಳಲು ಮಾತುಗಳೇ ಇಲ್ಲ…. ಒಟ್ಟಾರೆ ನಾಳೆಯನ್ನು ಗೆದ್ದವನು.. ಓದುಗನ ಮನವನ್ನು ಗೆಲ್ಲುವನು…..

ಧನ್ಯವಾದಗಳು
-ದೇವಿ ಶ್ರೀ ಪ್ರಸಾದ್

ನಿಮ್ಮ ಟಿಪ್ಪಣಿ ಬರೆಯಿರಿ